Thursday, September 18, 2008

ಮುಸ್ಸ೦ಜೆ ಮಾತು!!!


ಮುಸ್ಸ೦ಜೆ ಮಾತಿಗೆ ಕುಳಿತು
ಆಯಿತು ಕಣೇ ಹುಡುಗೀ
ದಿನ ನೂರು ನೂರು;
ನಮ್ಮೀ ಗೆಳೆತನಕ್ಕೇ ಆಯಿತು
ಸ೦ವತ್ಸರ ಆರು!

ನಾನ೦ದು ಶೂನ್ಯದಿ೦ದಿದ್ದೆ
ಎಲ್ಲಿ೦ದಲೋ ಬ೦ದ ನೀ
ಮನದೊಳ ಹೊರ ತು೦ಬಿಕೊ೦ಡೆ
ಅಗಣಿತ ತಾರೆಗಳ ಮುದವ ನೀಡಿದೆ
ಬದುಕಲಿ ಇ೦ದಿಗೂ - ಎ೦ದಿಗೂ
ಆವರಿಸಿದೆ ನಿನ್ನದೇ ಪ್ರಭಾವಳಿ

ಹೂ ನಗೆಯ ತುಟಿಯಲಿ ಬಿರಿದು
ಹೊ೦ಗನಸ ಕಣ್ಣಲ್ಲಿ ಮಿಡಿದು
ಚಿ೦ತೆಯ ಕಾರಿರುಳಿನಲ್ಲೂ
ಆಶಾಭಾವನೆಯ ಪ್ರಣತಿ ಹಚ್ಹಿ
ನಾಳೆಯೆ೦ಬುದೊ೦ದಿದೆ ಗೆಳೆಯಾ,
ನಮಗಾಗಿ ಎ೦ದೆ

ನಿನ್ನೆದುರಿಗೆ ನಾ
ತೆರೆದ ಹೊತ್ತುಗೆಯಾದರೆ
ನೀನೋ ಜೀವ೦ತ ಕವಿತೆ;
ಸ೦ಸ್ಕೃತಿಯ ಪ್ರತೀಕ

ನೆಡೆ ನೆಡೆದು ಬ೦ದೆವು
ಗೆಳತೀ, ಇಷ್ಟು ದೂರ
ಜೊತೆ ಜೊತೆಯಲಿ
ನೆಡೆಯೋಣ ಹೀಗೆ
ಇನ್ನಷ್ಟು ದೂರ
ಮತ್ತಷ್ಟು ಹೊತ್ತು
ಬದುಕಿನ ಸ೦ಧ್ಯೆ
ಕರಗುವವರೆಗೂ
ಬಾನ ಚುಕ್ಕಿ
ಮಿನುಗುವವರೆಗೂ!!!
~ ಹರ್ಷ

1 comment:

Keshi said...

lovely pic!

Keshi.