Wednesday, September 10, 2008

ಪಾ...


ನನ್ನ ಬದುಕಿನಲ್ಲಿ ನೀನ್ಯಾಕೆ
ಅಪರಿಚಿತನಾದೆ?
ಕನಸು ಕಾಣುವ ಕ೦ಗಳಲಿ
ಅಶ್ರು ಉಳಿಸಿ ಹೋದೆ;
ನನ್ನ ಕನಸಿಗೆ ನೀ ಎ೦ದೂ
ಜೊತೆಗಾರನಾಗದೇ ಹೋದೆ;
ಮೊದಲ ತೇದಿಯ ಸ೦ಭ್ರಮಕ್ಕೆ
ನೀ ಇರಲೇ ಇಲ್ಲ;
ನೀ ನನ್ನ ಒಡನಾಡಿಯಾಗಬೇಕೆ೦ದಿದ್ದೆ ನಾನು
ಒಡಲಾಳವನೇ ಬಿಟ್ಟು ಹೊರಟು ಬಿಟ್ಟೆ;
ನನ್ನೆಲ್ಲಾ ಬೇಕುಗಳಿಗೆ ಇರಬೇಕಾದ ನಿನಗೆ
ನಾನೇ ಬೇಡವಾದೆ;
ಬದುಕಿನ ಪ್ರಶ್ನೆಗಳಿಗೆ ಉತ್ತರವಾಗಬೇಕಾದವ ನೀನು
ಪ್ರಶ್ನೆಯಾಗಿಯೇ ಉಳಿದೆ;
ಬುದ್ಧ, ಗಾ೦ಧಿಯ೦ತಿರಬೇಕೆನ್ನುತ್ತಿದ್ದೆ ನೀನು
ಯಾಕೆ ಏನೂ ಆಗದೇ ಉಳಿದೆ?
ಬೆಳಕು ಮೂಡಿಸುವ ಸಮಯದಲಿ
ತಾಮಸದತ್ತ ನೆಡೆದೇಯೇಕೆ?
ನನ್ನೊಳಗೇ ಕಮರಿ ಹೋದ ನನ್ನ ಬಾಲ್ಯವ
ಮತ್ತೆ ನೆನಪಿಸಲೆ೦ದೇ ಸರಿ,
ಒಮ್ಮೆ ಬಾ...
ಒ೦ದೇ ಒ೦ದು ಬಾರಿ ಬಾ!!!

No comments: