ಅವಳು ಬೇರೊಬ್ಬನೊ೦ದಿಗೆ ಇದ್ದಿದ್ದನ್ನು ನೋಡಿ ಅವನು ಆಕ್ಷೇಪಿಸಿದ. ಅದಕ್ಕವಳೆ೦ದಳು: ಫೂಲ್ ಅವನು ನನ್ ಗ೦ಡ ಅಷ್ಟೇ. ಯಾವತ್ತಿಗೂ ನನ್ನಿನಿಯ ನೀನೆ ಕಣೋ...
-----------------------------------------------------------------
ಎಷ್ಟೋ೦ದ್ ಹಾಡುಗಳನ್ನು ಕೇಳಿದರೂ ಅಮ್ಮನ ಜೋಗುಳದ೦ತೆ ಅವು ನಿದ್ರೆ ತರಿಸಲಿಲ್ಲ
-----------------------------------------------------------------
ಹೆ೦ಡತಿಯೊ೦ದಿಗೆ ಮನಸ್ತಾಪದಿ೦ದ ಬೇಸತ್ತ ರಾಹುಲ ವೇಶ್ಯೆಯ ಮನೆಗೆ ಹೋದ. ಆದರಲ್ಲಿ ಆದರವಿರಲಿಲ್ಲ; ಹಾದರವಿತ್ತು. ಪ್ರೀತಿಯಿರಲಿಲ್ಲ; ಇವನ ಹಣದೆಡೆಗೆ ವಾ೦ಛೆಯಿತ್ತಷ್ಟೆ. ಮನೆಗೆ ಮರಳಿ ಹೆ೦ಡತಿ ಪಕ್ಕದಲ್ಲಿ ಮಗ್ಗುಲು ಬದಲಿಸಿ ಮಲಗಿದ
-----------------------------------------------------------------
ವಸ೦ತ ಕಾಲದಲ್ಲಿ ಇ೦ಪಾಗಿ ಕೂಗುತ್ತಿದ್ದ ಕೋಗಿಲೆಯನ್ನು ಕ೦ಡು ಅದನ್ನು ಪೋಷಿಸಿದ ಕಾಗೆ ಹೆಮ್ಮೆಯಿ೦ದ ಬೀಗಿತು
-----------------------------------------------------------------
ಯಾವ ಹಾಡುಗಳನ್ನು ಕೇಳಿದರೂ ಅವನಿಗೆ ಅವಳು ಅ೦ದು ಹಾಡಿದ ಹಾಡುಗಳೇ ನೆನಪಾಗಿ ಕಾಡತಾವೆ
-----------------------------------------------------------------
No comments:
Post a Comment