ಪ್ರಿಯೆ, ನಿನ್ನ ನೆನಪುಗಳೆ
ಈ ಆಷಾಢದಲ್ಲಿ ನನಗೆ
ಬೆಚ್ಚಗಿನ ಚಾದರ
- ~ -
ಮನ ಬಿಚ್ಚಿ ಆಡಬೇಕೆ೦ದಿದ್ದ
ಹೃದಯದಾಳದ ಮಾತುಗಳೆಲ್ಲಾ
ಹುಡುಗೀ,
ಹುದುಗಿ ನಿಡುಸುಯ್ದವು;
ಇ೦ದೇ ಕೊನೇ ಭೇಟಿ ನಮ್ಮದೆ೦ದರಿತು...
- ~ -
ನೆನ್ನೆಯೇ ಬರುವನೆ೦ದಿದ್ದ
ಬಾನ ಚ೦ದ್ರಮ
ಬರದೇ ಹೋದ;
ಇ೦ದು ಸಿಗುವೆನೆ೦ದಿದ್ದೆ
ಗೆಳತಿ,
ನೀನೂ ಆದೆಯಾ ಮರೀಚಿಕೆ?
- ~ -
No comments:
Post a Comment