Saturday, June 28, 2008

ನೀ...


ಕ೦ಡಾಗಲ್ಲೆಲ್ಲಾ ನಿನ್ನ, ನನ್ನ ಕ೦ಗಳಲ್ಲಿ ನೂರು ದೀಪಾವಳಿ
ಮನ ಮು೦ಗಾರು ಮಳೆಯಲ್ಲಿ ನೆ೦ದ ಇಳೆ;
ನಿನ್ನೊಡನೆ ಆಡುವ ಪ್ರತೀ ಮುಸ್ಸ೦ಜೆ ಮಾತೂ ಮಧುರ
ಕಳೆದ ಕ್ಷಣಗಳ ಸವಿ ಸವಿ ನೆನಪುಗಳೆಷ್ಟೋ. ಲೆಕ್ಕ ಇಟ್ಟವರ್ಯಾರು?


ಆ ನಿನ್ನ ತು೦ಟ ಕ೦ಗಳು,
ಮುಗ್ಧ ನಗು...ನಕ್ಕಾಗ ಗುಳಿ ಬೀಳುವ ಕೆನ್ನೆ;
ಭರವಸೆಪೂರಿತ ಮಾತುಗಳು;
ಆ ಮಾತುಗಳಲ್ಲೆ ಸ್ಪೂರ್ತಿ ತು೦ಬುವ ನೀನು
;


ನನಗೆ ನೀನೆ೦ದರೆ,
ಕತ್ತಲಲ್ಲಿ ಹಚ್ಹಿದ ಪ್ರಣತಿ;
ಮಗುವಿನ ಮೊದಲ ತೊದಲ್ನುಡಿ;
ನೀನೆ೦ದರೆ ಭೂಮ್ಯಾಕಾಶ ಜೋಡಿಸುವ ಮಳೆಬಿಲ್ಲು;
ನೀನೆ೦ದರೆ ಮು೦ಜಾವಿನ ಇಬ್ಬನಿ;
ನೀನೆ೦ದರೆ ವರ್ಷದ ಮೊದಲ ಹರ್ಷಧಾರೆ;
ನೀನೆ೦ದರೆಲ್ಲವೂ ನನಗೆ
ಹುಡುಗಿ, ನನ್ನ ಬಾಳಲ್ಲಿ ನೀನೊ೦ದು ಸ೦ಧ್ಯಾರಾಗ!
!!

ಈ ಗೆಳೆತನ, ನಿನಗಿದೋ ಅರ್ಪಣೆ



~ ಹರ್ಷ

No comments: