ಮಾತುಗಳು ಮೌನವಾದಾಗ;
ನಗುವು ಬರಿದಾದಾಗ
ಇರುವಿಕೆಯೂ ಆಗುವುದಸಹನೀಯ...
ಗೆಳತೀ, ನೀನಿರುವುದಲ್ಲಿ,
ಕಾಣದೆನಗೆ ನಿನ್ನೆದೆಯ ತಳಮಳ
ಇಕೋ, ನನ್ನೀ ಬೊಗಸೆ
ಅರುಹಿಕೋ ಇರುವುದೆಲ್ಲಾ ದುಗುಡ
ಭರವಸೆ ನೀಡಲಾರೆ, ಅಳಿಸುವೆ ನಿನ್ನೆಲ್ಲಾ ದು:ಖ;
ಆದರೆ, ಕೊಡಬಲ್ಲೆ ನಾಳೆಯ ಬಾಳಿನ ಭರವಸೆ...
ರಜನೀ ನ೦ತರ ಬಾರನೇ ರವೀ?
ಬ೦ದೇ ಬರುವ ಚೆಲ್ಲಲು ಬಾಳಿನ ಹೊ೦ಗಿರಣ.
~ ಹರ್ಷ
3 comments:
Nice poem :)...kavi yavag aadri ?
ಬ೦ದೇ ಬರುವ ಚೆಲ್ಲಲು ಬಾಳಿನ ಹೊ೦ಗಿರಣ.
-- Nireeksheyalli :(
Post a Comment