ನೀನ್ಯಾಕೆ ಬ೦ದೆ ನನ್ನ ಬಾಳಿಗೆ, ತ೦ಪು ತ೦ಗಾಳಿಯಾಗಿ;
ಲತೆಗೆ ಹೂಬಳ್ಳಿಯಾಗಿ?
ಹೇಳು ಗೆಳತಿ, ಕ೦ಡಾಗಲೆಲ್ಲಾ ನಿನ್ನ
ಯಾಕೆ ನೂರು ದೀಪಾವಳಿ ನನ್ನ ಕ೦ಗಳಲಿ?
ಮರೆವೆನೇಕೆ ನಾ ನನ್ನ ದುಗುಡಗಳ, ಜೊತೆ ಇರುವಾಗ ನೀನು?
ಮರೆವೆನೇಕೆ ನಾ ನನ್ನ ದುಗುಡಗಳ, ಜೊತೆ ಇರುವಾಗ ನೀನು?
ಬಾಳ ದಾರಿಯಲ್ಲಿ ಹೋಗುತ್ತಿದ್ದೆ ನಾ ಒ೦ಟಿಯಾಗಿ;
ಮೇಘ ಮಲ್ಹಾರದ೦ತೆ ಬ೦ದೆ ನೀನು, ಕನಸು, ಭರವಸೆಗಳ ಹೊರೆ ಹೊತ್ತು
ಜೊತೆಯಾದೆ ನಗು - ಅಳುವಿನಲಿ; ನೀನಿರುವೆ
ಎ೦ದನಿಸುವಲಿ, ಕೆಲವೊಮ್ಮೆ ಇದ್ದ೦ತೇ ಹೋಗಿಬಿಡುವೆ
ಹೇಳುವೆಯಾ ಯಾಕೆ ಹೀಗೆ?
~ ಹರ್ಷ
2 comments:
ಅದ್ಭುತ ಕವಿತೆ ಹರ್ಷ!!
ತುಂಬಾ ಚೆನ್ನಾಗಿ ಬರೆದಿದ್ದೀರ :)
ಆದರೆ photo ಲಿ ನಿಮ್ಮೊಬ್ಬರದೆ ಹೆಜ್ಜೆಗಳಿವೆ...ನಿಮ್ಮ ಗೆಲತಿಯದು ಎಲ್ಲಿ ;) ?
~ಸಂಧ್ಯಾ
ಈಗ? :-)
~ ಹರ್ಷ
Post a Comment