Tuesday, April 03, 2007

ಕೆಲವೊಮ್ಮೆ....

ಕೆಲವೊಮ್ಮೆ ಅನಿಸದಿರದು
ನಿನ್ನೊ೦ದಿಗಿನ ಗೆಳೆತನ
ನೀಡುತಿಹುದು ಎನ್ನ
ಜೀವಕ್ಕಾಗುವಷ್ಟು ಚೇತನ

ಮು೦ಜಾವಿನ ಶೀತಲ ಮಾರುತ
ಆ ನಿನ್ನ ನಿಷ್ಕಲ್ಮಷ ನಗು
ಸ೦ಜೆಯ ಸ೦ಧ್ಯೆಯ ಹೊ೦ಗಿರಣ
ನಿನ್ನ ಬೆಚ್ಚಗಿನ ಬಿಸುಪು

ಬಾಳ ಕವಲಿನಲಿ ನಾನು
ಹಾದಿ ತಪ್ಪಿ ನಿ೦ತಾಗ
ನೀ ತೋರಿದ ಮಾರ್ಗದರ್ಶನ
ಆ ನಿನ್ನ ಸಲಹೆ... ಓಹ್!!! ಅದೆಷ್ಟು ಅಮೂಲ್ಯ
ಇರುವೆಯ ಗೆಳತಿ ನೀ ಹೀಗೆ
ಕೊನೆವರೆಗೂ ನನ್ನ ಜೊತೆಗೆ???

3 comments:

Shiv said...

ಹರ್ಷ,

ಯಾವಾಗಲೂ ಹೀಗೆ ನಿಮ್ಮ ಜೊತೆಯಾಗಿ-ಕವಲು ದಾರಿಯಲ್ಲಿದ್ದಾಗ ನಿಮ್ಮ ಮಾರ್ಗದರ್ಶಿಯಾಗಿ ಇರಲಿ ನಿಮ್ಮ ಗೆಳತಿ..

ಅಂದಾಗೆ ಈ ಮೇಲಿನ ಪೋಸ್ಟ್ ಅಲ್ಲಿ ಕಾಮೆಂಟ್ ಲಿಂಕ್ ಯಾಕೇ ಕೊಟ್ಟಿಲ್ಲಾ ಸಿವಾ?

Unknown said...

ಶಿವ್,
ಧನ್ಯವಾದ.
ಲಿ೦ಕ್ ಕೊಟ್ಟಿದ್ದೀನಿ ಕಣಪ್ಪೊ

~ಹರ್ಷ

ಕುಕೂಊ.. said...

ಕವನ ತುಂಬಾ ಚನ್ನಾಗಿದೆ.

ಧನ್ಯವಾದಗಳು
ಕುಮಾರಸ್ವಾಮಿ.ಕಡಾಕೊಳ್ಳ
ಪಣೆ