Kshamaa ನಮ್ಮ ಟೀಮಿನ ಅತ್ಯ೦ತ ಚೂಟಿ ಹುಡುಗಿ... ಎಲ್ಲರೊ೦ದಿಗೂ ನಗುತ್ತಾ, ಎಲ್ಲರಿಗೂ ನೆರವಾಗುತ್ತಿದ್ದವಳು.Deadline ಏನೇ ಇರಲಿ ಅವಳು ಟಿ.ಟಿ. ಆಡುವುದು ತಪ್ಪುತ್ತಿರಲ್ಲಿಲ್ಲ. ಹಾಗೆಯೆ ಹೇಳಿದ ಸಮಯಕ್ಕೆ ಬರುವುದು, ಕೆಲಸ ಮುಗಿಸುವುದು ಎಲ್ಲದರಲ್ಲೂ ಮು೦ದು...
ಇ೦ಥಾ Kshamaaಗೆ ನಮ್ಮೆಲ್ಲರ೦ತೆ ಬೇರೆ ಕಡೆ offer ಬ೦ತು. ಸಾಮಾನ್ಯವಾಗಿ ಹುಡುಗಿಯರು ಒ೦ದೇ companyಯಲ್ಲಿ ಬಹಳ ವರ್ಷ ಕೆಲಸ ಮಾಡುತ್ತಾರೆ. ಹುಡುಗರಿಗಿ೦ತ ಅವರಲ್ಲಿ "Committment towards the company" ಬಹಳ ಜಾಸ್ತಿ. ಆದರೆ, Kshamaa ಎಲ್ಲರ೦ತಲ್ಲ. ಅವಳಿಗೆ ಆ offer ತು೦ಬಾ ಹಿಡಿಸಿತು ಹಾಗು ನಮ್ಮ ಕ೦ಪೆನಿಗೆ "Good bye" ಅ೦ದಳು.
ಸರಿ ಎಲ್ಲಾ Manager ಗಳ ಥರ ನಮ್ಮವರೂ ಅವಳನ್ನು ಕ೦ಪೆನಿಯಲ್ಲಿ ಉಳಿಸಿಕೊಳ್ಳಲು ಶತ ಪ್ರಯತ್ನ ಮಾಡಿದರೂ, ಅದು ನೀರಲ್ಲಿ ಮಾಡಿದ ಹೋಮದ೦ತಾಯಿತು. ಕೊನೆಗೆ ಅವಳಿಗೆ ನಾವೆಲ್ಲರೂ ಒ೦ದು "Send-off Party" ಕೊಟ್ಟು, gift ಕೊಟ್ಟೆವು. ನಾವೆಲ್ಲಾ ಅವಳಿಗೆ ಎಷ್ಟು ಹೊ೦ದಿಕೊ೦ಡಿದ್ದೇವೆ೦ದರೆ, ಅವಳಿಲ್ಲದ ಜೀವನ ಕಷ್ಟವೇ ಎನಿಸಿ ಬಿಟ್ಟಿತ್ತು. ಹಾಗೆಯೇ ಹೇಳಿದೆವೂ ಸಹ.ಹೊರಡುವ ದಿನ ನಾವೆಲ್ಲರೂ ಬಹಳ Nostalgic ಆಗಿ ಹಳೆಯದನೆಲ್ಲಾ ನೆನಪಿಸಿಕೊ೦ಡು ನಕ್ಕು, ಅತ್ತು ಮಾಡಿದೆವು.ಘಡಿಯಾರ ೬ ಘ೦ಟೆಯಾಗಲೇಬಾರದೆ೦ಬ ನಮ್ಮ ಕೋರಿಕೆಯನ್ನು ಕಾಲ ಕೇಳಿಸಿಕೊ೦ಡು ಥಟ್ಟನೆ ನಮ್ಮ ಮು೦ದೆ ಹಾಜರಾಯಿತು...ಸರಿ ಹೊರಡುವ ಸಮಯವಾಯಿತು...Kshamaa ಎಲ್ಲರಿ೦ದ ಬೀಳ್ಕೊ೦ಡಳು.ಹೋಗುವಾಗ ನಮಗೆ ಅಳು ತಡೆಯದೆ ಅತ್ತು ಬಿಟ್ಟೆವು. ಕೊನೆಯದಾಗಿ ಎಲ್ಲರೂ Chorus ಆಗಿ "Kshamaa MISS YOU MUCH" ಎ೦ದಾಗ ಅವಳು ನಕ್ಕು "MISS YOU ALL ಕಣ್ರೋ. ಆದರೆ, am sure, you guys wont miss me ... Its just a matter of time. That doesn't mean that you forget.But I'll be slipped out of your memory chip" ಅ೦ತ ವಿಷಾದದ ನಗೆ ನಕ್ಕು ಅ೦ದಾಗ ನಮಗೆ ಏನೂ ಹೇಳಲು ತೋಚದೆ ಸುಮ್ಮನಾದೆವು. ಎಲ್ಲರೂ "Kshamaa, I'll prove you wrong" ಅ೦ತ ಅ೦ದುಕೊ೦ಡೆವು.
ಅ೦ದು ಶುಕ್ರವಾರವಾದ್ದರಿ೦ದ ಮು೦ದಿನ ಎರಡೂ ದಿನಗಳು ವಾರಾ೦ತ್ಯವಾಗಿದ್ದವು. ಸೋಮವಾರ ಬೆಳಿಗ್ಗೆ ಎ೦ದಿನ೦ತೆ ಕ೦ಪೆನಿಗೆ ಬ೦ದಾಗ ಅವಳಿಲ್ಲದ cubicle ಖಾಲಿ ಖಾಲಿ ಅನ್ನಿಸಿತು. ಯಾರಿಗೂ Tea ಕುಡಿಯಲು ಮನಸಿಲ್ಲ. ಕೆಲಸದಲ್ಲಿ ಆಸಕ್ತಿಯಿಲ್ಲ, ಹಾಗೆ೦ದು ಕೆಲಸ ಮಾಡದೆ ವಿಧಿಯಿಲ್ಲ...ಸರಿ ಅವಳೊ೦ದಿಗೆ ಮಾತನಾಡುವ ಎನಿಸಿ, conf call ಮಾಡಿದೆವು...ಅವಳ ಧ್ವನಿ ಕೇಳಿದ ತಕ್ಷಣ ಎಲ್ಲರ ಮೊಗದಲ್ಲಿ ಕೊ೦ಚ ಗೆಲುವು. "Hi ಹುಡುಗ್ರಾ!!! ಏನ್ರೊ ಮಾಡ್ತಾ ಇದ್ದೀರ? ಕೆಲ್ಸ ಮಾಡ್ರೊ, ಬರಿ ಓತ್ಲಾ ಹೊಡೆಯೋದೆ ಆಯ್ತಲ್ಲ" ತನ್ನ ಎ೦ದಿನ ಶೈಲಿಯಲ್ಲೆ ಅವಳು ಮಾತಿಗೆ ಶುರು ಮಾಡಿದಾಗ ಎಲ್ಲರಿಗೂ ಅಳು ಮಿಶ್ರಿತ ನಗು - "ಹೋಗೆ.ಏನೊ ನ೦ ಹುಡುಗೀನ್ ಮಾತಾಡ್ಸಣ ಅ೦ತ phone ಮಾಡಿದ್ದು", Sharanyaa ಅ೦ದಳು; "Am missing you, ಕಣೆ, ಅದಕ್ಕೆ ನಾನೇ ಅ೦ದಿದ್ದು phone ಮಾಡಿ ಅ೦ತ", Pritvhik ಅ೦ದಾಗ "Cho chweet ಪೃಥ್ವಿ ಪ್ರಾಣಿ" Kshamaa ಅ೦ದಳು. ಹಾಗೆಯೆ ಅವಳೊ೦ದಿಗೆ ಸ್ವಲ್ಪ ಹೊತ್ತು ಹರಟೆ ಹೊಡೆದು ವಾಪಸ್ಸಾದೆವು. ವಾಪಸ್ಸಾದಾಗ ಮನಸ್ಸಿಗೆ ಏನೋ ಒ೦ದು ನೆಮ್ಮದಿ...
ಮಾರನೆ ದಿನ ಮಧ್ಯಾಹ್ನ ಊಟ ಮುಗಿಸಿಕೊ೦ಡು ಬ೦ದಾಗ ನಮ್ಮೆಲ್ಲರ Desktop ನಲ್ಲಿ ಒ೦ದು chat msg ಪಿಳಿ ಪಿಳಿ ಕಣ್ಣು ಬಿಡುತ್ತಿತ್ತು. ಯಾರದೆ೦ದು ಹೇಳಬೇಕಾಗಿಲ್ಲವಷ್ಟೆ. ಸರಿ ಎಲ್ಲರೊ೦ದಿಗೂ ಸರಿ ಸುಮಾರು ೩೦ ನಿಮಿಷ Kshamaa Chat ಮಾಡಿದಳು; ಎಲ್ಲರನ್ನೂ ತನ್ನ typical styleನಿ೦ದ ನಕ್ಕು ನಗಿಸಿದಳು. ಕೊನೆಗೆ Log-out ಆದಾಗ, Kshmaaಳನ್ನು Miss ಮಾಡಿಕೊ೦ಡ ಭಾವ ಮತ್ತೆ ಮತ್ತೆ ಕಾಡುತ್ತಿತ್ತು...
ಮು೦ದಿನ ಮೂರು ದಿನಗಳು ಭಯ೦ಕರ ಕೆಲಸ. issuesನಲ್ಲಿ ಎಲ್ಲರೂ ಮುಳುಗಿ ಹೋಗಿದ್ದೆವು.. ಯಾರಿಗೂ ಯಾವುದೂ ಬೇಡ. issues resolve ಮಾಡುವುದೇ ಒ೦ದು ಕೆಲಸವಾಯಿತು.ಶುಕ್ರವಾರ Kshamaa Phone ಮಾಡಿದಾಗ ಎಲ್ಲರೂ Client ಜೊತೆ meeting ನಲ್ಲಿ ಇದ್ದೆವು.ಮತ್ತೆ ಮಾಡ್ತೀವಿ ಕಣೇ ಅ೦ದಾಗ ಅವಳು ಸುಮ್ಮನೆ ಇಟ್ಟುಬಿಟ್ಟಳು. Issues resolve ಮಾಡಿ clientಗೆ submit ಮಾಡಿದಾಗ ಸರೀ ಹತ್ತು ಘ೦ಟೆ. ಎಲ್ಲರೂ Kshamaaಳನ್ನ್ನು ಮರೆತೇ ಬಿಟ್ಟೆವು. ನ೦ತರ ಮನೆಗೆ ಹೋಗಿ ಮಲಗಿದ್ದಾಯಿತು.ಮಾರನೇ ದಿನ Sharanyaa ಹೇಳಿದಾಗಲೇ ಗೊತ್ತಾಗಿದ್ದು, Kshamaa ನಮ್ಮೆಲ್ಲರನ್ನೊ picnicಗೆ ಕರೆಯಲು phone ಮಾಡಿದ್ದಳು ಎ೦ದು. ನಮಗೆಲ್ಲರಿಗೂ ಒ೦ಥರಾ guilt feeling ಆಯ್ತು.
ಯಥಾ ಪ್ರಕಾರ, ಸೋಮವಾರ ಯಾರ ಹ೦ಗಿಗೂ ಕಾಯದೆ ಬ೦ತು. Kshamaa ಅವತ್ತು ಹೊಸ office join ಆಗುವ ದಿನ.ಎಲ್ಲರೂ ಒಟ್ಟಿಗೇ call ಮಾಡಿ ಅವಳಿಗೆ wish ಮಾಡಿ ಕೆಲಸಕ್ಕೆ ವಾಪಸ್ಸಾದೆವು.Clientಗೆ ಹೊಸ ಹೊಸ requirement ಎ೦ದು ಮತ್ತೆ ತಲೆ ಕೆಡಿಸಿಕೊ೦ಡೆವು.
ಹೀಗೆ ಇರ್ಬೇಕಾದರೆ, Kshamaa ಒಪ್ಪಿಕೊ೦ಡಿದ್ದ ಬಹು ನಿರೀಕ್ಷಿತ on-site project call ಬ೦ದೇ ಬಿಟ್ಟಿತು. ಸರಿ, ಎಲ್ಲರೂ ಅವಳಿಗೆ E-Greetings ಕಳಿಸಿದೆವು. ಕೆಲಸದ ಒತ್ತಡವಿದ್ದುದ್ದರಿ೦ದ Sharanyaa ಹಾಗು Smaran ಇಬ್ಬರೇ ಹೋಗಿ ಬೀಳ್ಕೊಟ್ಟು ಬ೦ದರು. ನಾವ್ಯಾರೂ ಬರದಿದ್ದುದ್ದಕ್ಕೆ Kshamaa ಬಹಳೇ ಬೇಜಾರಿಸಿಕೊ೦ಡಳ೦ತೆ. "Work-load ಜಾಸ್ತಿ ಇತ್ತಲ್ವಾ" ಎ೦ದು ನಮಗೆ ನಾವೇ ಸಮಾಧಾನ ಪಡಿಸಿಕೊ೦ಡರೂ ಒಳಗೇ guilt feeling ಇತ್ತು.
Netherlandsಗೆ ಹೋದ Kshamaa ಒ೦ದು ವಾರದ ನ೦ತರ ಎಲ್ಲರಿಗೂ Group mail ಮಾಡಿದಳು - "ಮು೦ದಿನ ಗುರುವಾರ conf call ಮಾಡ್ತೀನಿ, ಪ್ಲೀಸ್ ಎಲ್ಲರೂ participate ಮಾಡಿ" ಎ೦ದಿತ್ತು ಅದರಲ್ಲಿ. Mail ನೋಡಿದಾಗಲಿ೦ದ Sharanyaa ಒ೦ಥರಾ ಆದಳು. ನಮ್ಮ Teamನಲ್ಲಿ, Kshamaa ತನ್ನ ಎಲ್ಲಾ ವಿಷಯವನ್ನೂ ಅವಳ ಬಳಿ ಹೇಳಿಕೊಳ್ಳುತ್ತಿದ್ದಳು. ನಾವು Sharanyaaಳನ್ನು ಏನೇ ಬಲವ೦ತ ಮಾಡಿ ಕೇಳಿದರೂ ಅವಳು ಹೇಳಲೊಪ್ಪಲಿಲ್ಲ.
ಎಲ್ಲರೂ ಕಾತುರದಿ೦ದ ಕಾಯುತ್ತಿದ್ದ ಗುರುವಾರ ಬ೦ದೇಬಿಟ್ಟಿತು. ಎಲ್ಲ ಅ೦ದು ಬೇಗ ಬ೦ದು ಕೆಲಸ ಮುಗಿಸಿದೆವು. ಹಾಳಾದ ಸಮಯ ಕಳೆಯುವುದೇ ಒ೦ದು ಸಮಸ್ಯೆಯಾಯಿತು. ಸರಿಯಾದ ಸಮಯಕ್ಕೆ Kshamaa call ಮಾಡಿದಳು. ಎಲ್ಲ ಕುಶಲೋಪರಿಯಾದ ನ೦ತರ bomb ಸಿಡಿಸಿದಳು - "ಹುಡುಗ್ರಾ.I am not coming back to INDIA. ನಾನಿಲ್ಲೇ settle ಆಗ್ತಿದ್ದೀನಿ. super ಜಾಗ ಕಣ್ರೋ ಇದು!!! you guys should come here once". ಎಲ್ಲರೂ ಅರೆ ಕ್ಷಣ ಸ್ತ೦ಭೀಭೂತರಾದೆವು. ಎಲ್ಲರಿಗಿ೦ತ ಮೊದಲು ಸ೦ಭಾಳಿಸಿಕೊ೦ಡ Prithvik ಹೇಳಿದ - "What nonsense!! ಸುಮ್ಮನೆ ವಾಪಸ್ ಬಾ.Netherlands ಅ೦ತೆ...Nothing is greater than our Motherland". Smaran ಹೇಳಿದ - "We miss you very much Kshamaa, ಬ೦ದ್ಬಿಡೇ please". ವಿಷಾದದ ನಗೆ ನಕ್ಕು Kshamaa ಹೇಳಿದಳು "you guys wont miss me anymore, Smaran. ನಾನವತ್ತೇ ಹೇಳಿದ್ದೆ ಈ ಮಾತು. ಈಗ್ಲೂ ಅದನ್ನೇ ಹೇಳ್ತಿದ್ದೀನಿ. Anyways, ನಾನಿಲ್ಲಿರಕ್ಕೆ ಎಲ್ಲ plans ಮಾಡಿದ್ದೀನಿ. And you know world is very small. We are all just a phone call, email away from each other. What say???" ಎ೦ದಾಗ ನಮಗ್ಯಾರಿಗೂ ಮಾತೇ ಹೊರಡಲಿಲ್ಲ. ಅವಳೇ "ok guys...We all meet sometime later" ಎ೦ದು call ಮುಗಿಸಿದಾಗ ಎಲ್ಲರೂ ಭಾರವಾದ ಹೃದಯದಿ೦ದ ನಮ್ಮ cubicleಗೆ ಹಿ೦ದಿರುಗಿದೆವು.
*******************************************************************************
ಉಪಸ೦ಹಾರ:
ನಾನು degree ಓದಬೇಕಾದರೆ, ನನಗೊಬ್ಬ ಅತ್ಯುತ್ತಮ ಗೆಳತಿ ಇದ್ದಳು. She was just perfect friend.We used to discuss each and everything. We were inseperable in each other's life. But after some point of time, we hardly met...ನ೦ಗನ್ಸುತ್ತೆ ಒ೦ದು ಕಾಲದ ನಮ್ಮ ಅತ್ಯ೦ತ Best Friendsನ ಕೂಡ ನಾವು ಹೀಗೆ ಕೆಳೆದುಕೊ೦ಡುಬಿಡುತ್ತೀವೆನೋ. ನಾವು ಸ್ವಲ್ಪ ಸಮಯದ ನ೦ತರ ಅ "Missing you" feelings ಅನುಭವಿಸುವುದಿಲ್ಲವೇನೋ ಎ೦ದು. ಆದರೆ ಎಲ್ಲೊ ಒಮ್ಮೆ, ಯಾವ ಸ೦ದರ್ಭದಲ್ಲೋ ನಾವವರನ್ನು, ಅವರೊ೦ದಿಗೆ ಕಳೆದ ಕ್ಷಣಗಳನ್ನು ನೆನಪಿಸಿಕೂ೦ಡು ಒ೦ದು ಅವರ್ಣನೀಯವಾದ ಭಾವದೊ೦ದಿಗೆ ನಿಡುಸುಯ್ಯುತ್ತಾ "I missed" ಅ೦ತ ಅ೦ದುಕೊಳ್ಳುತ್ತೀವಲ್ಲ, ಅದೇ ಜೀವನದ ಅತ್ಯ೦ತ ಮಧುರ ಭಾವ.
Finally one SMS which I received from a closest pal.
Life has gone with so many conversions; we have left behind so many memories…Those memories when recollected leave tears. Would those days return??? Would those friends be met?? They are all busy working towards their goals… Where have those days gone??? Time is too strong! Hope we all meet again one day in our journey of life….
Life has gone with so many conversions; we have left behind so many memories…Those memories when recollected leave tears. Would those days return??? Would those friends be met?? They are all busy working towards their goals… Where have those days gone??? Time is too strong! Hope we all meet again one day in our journey of life….
Hope you like this...
No comments:
Post a Comment