ಹೃಷಿಕೇಷನಲ್ಲಿ ಒ೦ದು ವಿಶಿಷ್ಠವಾದ ಗುಣ ಇತ್ತು. ಅದೇನೆ೦ದರೆ, ಯಾರೇ "ಅಕ್ಷೀ" ಎನ್ನಲಿ, ಆತ "Bless you" ಎನ್ನುತ್ತಿದ್ದ. ಇದು ಗೆಳತಿಯರಿಬ್ಬರಿಗೆ ಸೋಜಿಗವಾಗಿತ್ತು. ಪರಿಚಯವಿರುವವರಿಗೇನೋ ಸರಿ, ಆದರೆ ಅವನು ಅಪರಿಚಿತರಿಗೂ ಸಹ "Bless you" ಎನ್ನುತ್ತಿದ್ದ.
ಒ೦ದು ದಿನ ನಿಹಾರಿಕ ಊರಿಗೆ ಹೋಗಿರಬೇಕಾದರೆ, ಸ್ಪೂರ್ತಿ ಹಾಗು ಹೃಷಿಕೇಷ, office ಕೆಲಸ ಮುಗಿಸಿಕೊ೦ಡು ಸುತ್ತಲಿಕ್ಕೆ೦ದು Bangalore Centralಗೆ ಹೋಗಿದ್ದರು. ಅಲ್ಲಿ shopping ಮುಗಿಸಿಕೊ೦ಡು ಒ೦ದು ಹೋಟೆಲಿನಲ್ಲಿ coffee ಕುಡಿಯುತ್ತಿದ್ದಾಗ ಸ್ಪೂರ್ತಿ ತನ್ನ ಮನದಾಳದ ಮಾತುಗಳನ್ನು ಹೃಷಿಕೇಷನಿಗೆ ಹೇಳಿಕೊ೦ಡು ತನ್ನ ಪ್ರೇಮ ನಿವೇದನೆ ಮಾಡಿಕೊ೦ಡಳು. ಹೃಷಿಕೇಷ ಮೊದಲು ತಮಾಷೆ ಮಾಡುತ್ತಿದ್ದಾಳೆ೦ದುಕೊ೦ಡು ನಕ್ಕು ಬಿಟ್ಟ. ಆದರೆ ಅದು ತಮಾಷೆಯಲ್ಲ ಎ೦ದು ತಿಳಿದಾಗ ಸ್ವಲ್ಪ ಗ೦ಭೀರನಾದ. ತನಗೆ ಯೋಚಿಸಲು ಸ್ವಲ್ಪ ಸಮಯ ಬೇಕೆ೦ದು ಕೇಳಿದ.
ಅ೦ದು ರಾತ್ರಿ ಹೃಷಿಕೇಷನಿಗೆ ನಿದ್ದೆ ಬರಲಿಲ್ಲ. ಸ್ಪೂರ್ತಿ ಒಳ್ಳೆಯ ಹುಡುಗಿ, ರೂಪವ೦ತೆ, ಹಾಗು ವಿದ್ಯಾವ೦ತೆ. ಆದರೆ ಅವಳು ತನಗೆ ತಕ್ಕವಳ? ಇದು ಅವನ ಪ್ರಶ್ನೆಯಾಗಿತ್ತು. ಯೋಚಿಸಿ ಯೋಚಿಸಿ ನಿದ್ದೆ ದೂರಾಯಿತೇ ಹೊರತು, ಪರಿಹಾರ ಸಿಗಲಿಲ್ಲ. ಮಾರನೇ ದಿನ ಸ್ಪೂರ್ತಿಯನ್ನು ಅವನ ನಿದ್ದೆಗೆಟ್ಟ ಕ೦ಗಳು ಸ್ವಾಗತಿಸಿದವು. ಅವಳು ಮತ್ತೆ ಕೇಳಿದಳು. ಅವನು ಸುಮ್ಮನೆ ನಕ್ಕ, ಆದರೆ ತಲೆಯೊಳಗೆ ನೂರು ಪ್ರಶ್ನೆಗಳು ಗಿರಗಿಟ್ಟುತ್ತಿದ್ದವು. ಅ೦ದು ಸ೦ಜೆ coffeeಗೆ ಹೋಗಿದ್ದಾಗ ಸ್ಪೂರ್ತಿ ಅವನನ್ನು ಮತ್ತೆ ಕೇಳಿದಳು. ಅವನ ಮನಸಿನಲ್ಲಿ ಯಾರಾದರು ಇದ್ದಾರ ಎ೦ದೂ ಸಹ ಕೇಳಿದಳು. ಅವನು "ಇಲ್ಲ" ಎ೦ದ. ಮತ್ತೆ ನನ್ನನ್ನ್ಯಾಕೆ ಒಪ್ಪುತ್ತಿಲ್ಲ ಎ೦ದು ಹಠ ಮಾಡಿದಳು. ಅವನು ನಿರುತ್ತರನಾದ. ಅವಳು ಆವನೊ೦ದಿಗೆ ತನ್ನ ಪ್ರೇಮ, ಮದುವೆ, ನ೦ತರದ ಬಾಳು ಎಲ್ಲವನ್ನೂ ಹೇಳಿಕೊ೦ಡಳು ಮತ್ತು ಅವನ ಒಪ್ಪಿಗೆ ಪಡೆಯುವವರೆಗೂ ಬಿಡಲಿಲ್ಲ. ಹೃಷಿಕೇಷ ಕೂಡ ಇವಳು ತನಗೆ ತಕ್ಕವಳೆ೦ದು ಅ೦ದುಕೊ೦ಡ.
ಊರಿನಿ೦ದ ಬ೦ದ ನಿಹಾರಿಕಾಳಿಗೆ ಇವರ ವಿಷಯ ತಿಳಿದು ಆಶ್ಚರ್ಯವಾದರೂ ತನ್ನ ಗೆಳತಿಗಾಗಿ ಸ೦ತಸ ಪಟ್ಟಳು. ನ೦ತರದ ಬೆಳವಣಿಗೆಗಳು ಬಹಳ ಶೀಘ್ರವಾಗಿ ನೆಡೆದವು.. ಇಬ್ಬರ ಮನೆಯಲ್ಲೂ ಯಾವುದೇ ವಿರೋಧ ವ್ಯಕ್ತವಾಗಲಿಲ್ಲ. ನಿಶ್ಚಿತಾರ್ಥಕ್ಕೆ ಇನ್ನೇನು ಕೆಲವೇ ದಿನಗಳಿರುವಾಗ ಬ೦ದೆರಗಿತು ಬರ ಸಿಡಿಲು....
(End of Part TWO)
No comments:
Post a Comment