Friday, January 26, 2007

ಜನವರಿ ೨೬ ರ ಮು೦ಜಾವು


ಓ ಶ್ವೇತ ಇಬ್ಬನಿಯೇ...

ಓ ಚೇತನ ಕಿರಣವೇ...

ತೋಯಿಸಿರಿ ಎನ್ನ ಭುಜಗಳನ್ನು

ಮೃದುವಾಗಿ, ನಿಶಬ್ದವಾಗಿ...

ಪ್ರಶಾ೦ತವಾಗಿರುವ ಮು೦ಜಾವಿನ೦ದು.

ಅಪ್ಪಿಕೊಳ್ಳಿರಿ ನನ್ನ ಹೃದಯ ಹಗುರಗೊಳಿಸಲು

ಎನ್ನನ್ನು ಬಿಳುಪಿಸಲು

ಕಲುಶಗೊ೦ಡಿರುವ ಮನವನ್ನು ತಿಳಿಗೊಳಿಸಲು

ಬೆಳಗಿಗೆ ನವಚೇತನ ತು೦ಬಲು

ನನಗೆ ಹೊಸ ಬಾಳ ಬದುಕಲು

ಕಲಿಸಿರಿ ನನ್ನ ಬದುಕು ನಾನೇ ಬದುಕಲು

ನನ್ನ ತಪ್ಪು ನಾನೇ ಸರಿಪಡಿಸಿಕೊಳ್ಳಲು

ಬೀಳಿರಿ ನನ್ನ ದಿನಕ್ಕೆ ಹೊಸ ಹುರುಪು ಕೊಡಲು

ಚಿಕ್ಕ ಚಿಕ್ಕ ಸ೦ತೋಷವನ್ನು ಕೂಡ ಆಹ್ಲಾದಿಸಲು

ತು೦ಬಿರಿ ಚೈತನ್ಯ, ಲೋಕಕ್ಕೆ ಸಾರಿ ಹೇಳಲು...

ನಾನು "ನಾನೇ" ಎ೦ದು.

ಓ ಶ್ವೇತ ಇಬ್ಬನಿಯೇ...

ಓ ಚೇತನ ಕಿರಣವೇ...

ತೋಯಿಸಿರಿ ಎನ್ನ ಭುಜಗಳನ್ನು

2 comments:

Shiv said...

ಬೆಳಕಿನ ಕಿರಣಗಳು ನಿಮ್ಮ ಬದುಕಿನಲಿ ನವೋತ್ಸಾಹ,ಚೈತನ್ಯ ಮತ್ತು ಸಂತಸಗಳನು ತರಲಿ..

Unknown said...

ಶಿವ್,
ಧನ್ಯವಾದಗಳು. ನಿಮಗೂ ಸಹ ಬದುಕು ಉಲ್ಲಾಸ ಹಾಗು ಆಹ್ಲಾದ (ನನಗೆ ಈ ಎರಡೂ ಪದಗಳು ಬಹಳ ಇಷ್ಟ) ತರಲಿ.

~ಹರ್ಷ