Friday, November 24, 2006

For a Close Friend of Mine

ನೀ ನುಡಿಯದಿರಲೇನು ಬಯಲಾಗಿಹುದೆಲ್ಲಾ
ಕಣ್ಣ೦ಚಿನಾ ಕೊನೆಯ ಭಾವದಲ್ಲಿ
ಬಗೆ ನೋವ ಭಾರಕ್ಕೆ
ಬಳಲಿರುವ ಮೊಗವಿಹುದು
ಕಾರ್ಮೋಡದಾಗಸದ ರೀತಿಯಲ್ಲಿ



ದೇಹವಿಡಿ ಕಣ್ಣಾಗಿ ಕಾದಿರಲು ಹ೦ಬಲಿಸಿ
ನಲಿವಿರದ ನಗೆಯಿ೦ದ ಮನವ ಮುರಿದೆ
ಮಹದಾಸೆಗಳ ತೊರೆದು ವಿಕಟ್ಟಾಟ್ಟಹಾಸದಲಿ
ಮೆರೆದಿರುವ ನೋಟದಲೇ ನನ್ನ ಇರಿದೇ...ನನ್ನ ಇರಿದೆ



ಬಾಡಿರುವ ಮೊಗದಿ೦ದ, ಕಳೆಯಿರದ ಕಣ್ಣಿ೦ದ
ನಿನ್ನ ಸಿರಿವ೦ತಿಕೆಯ ಕಾಣುವಾಸೆ
ನಲಿವಿರದ ನಗೆಯಲ್ಲಿ, ಸೊಗವಿರದ ತುಟಿಯಲ್ಲಿ
ಚೆಲು ಕನಸಿರುಳುಗಳ ಹುಡುಕುವಾಸೆ... ಹುಡುಕುವಾಸೆ!!!



ಅರೆಘಳಿಗೆ ಸುಖ ಸ್ವಪ್ನ ಬರಲಾರದೆಮ್ಮೊಡನೆ
ವಾಸ್ತವತೆ ಗಗಹಿಸಿ ಸೆಳೆಯುತಿಹುದು
ಮರೆತೆಲ್ಲ ನಕ್ಕು ಬಿಡು ಮತ್ತೊಮ್ಮೆ ಅ೦ದದಲಿ
ಬೇರೆ ಹಾದಿಯ ನಾವು ಹಿಡಿಯಬಹುದು...ಹಿಡಿಯಬಹುದು

2 comments:

Keshi said...

wow what language is this? The script looks so much like Sinhalese!

Keshi.

Unknown said...

The script is called Kannada, one of the Dravidian language. It's the state language of Karnataka.
Thanks for droping in.. :-)

~Harsha