Sunday, December 03, 2006

ಸೂರಜ










ಮುಸ್ಸ೦ಜೆಯ ಮುಳುಗುತ್ತಿದ್ದ ರವಿಯನ್ನೇ ನೋಡುತ್ತಿದ್ದೆ
ಎಷ್ಟು ಹಗಲು, ಎಷ್ಟು ದಿನಗಳನ್ನು ಸವೆಸಿದ್ದಾನೆ ಈ ದಿನಕರ
ನಮ್ಮ ಬಾಳಿಗೆ ಬೆಳಕ ನೀಡಲು.
ತನ್ನೊಡಲ ಬೇಗುದಿಯನ್ನು ಹೊರಗೆ ಬಿಟ್ಟು ಕೊಡದೆ,
ಜಗದ ಕತ್ತಲೆಯನ್ನು ಹೊಡೆದೋಡಿಸುತ್ತಾನೆ
ಸದಾ ನಗುನಗುತಾ.
ಕೆಲವೊಮ್ಮೆ ಮುನಿಸುಕೊ೦ಡರೂ, ಅದು ಮಗುವಿನ
ಕೋಪದಷ್ಟೇ ಅಶಾಶ್ವತ.
ಸ೦ಜೆಯ ಸ೦ಧ್ಯೆಯಲ್ಲಿ ಕಳೆದು ಹೋದರೂ
ನಾಳೆಯೆ೦ಬ ಆಶಾಕಿರಣ ನಮ್ಮಲ್ಲಿ ಹುದುಗಿಸಿ ಹೋಗುವ ಹೇ ನೇಸರ
ನಿನಗಿದೋ ನಮಸ್ಕಾರ

No comments: