Thursday, October 21, 2010

ನ್ಯಾನೊ ಕಥೆಗಳು

ದಿನವೂ ನೂರಾರು ಮನೋರೋಗಿಗಳ ದುಖ-ದುಮ್ಮಾನ, ಸಮಸ್ಯೆ ಆಲಿಸುತ್ತಾ, ಪರಿಹರಿಸುತ್ತಾ ಇದ್ದ ಪ್ರಖ್ಯಾತ ಸೈಕಿಯಾಟ್ರಿಸ್ಟ್ ಕೊನೆಗೆ ಅದೆ ಆಸ್ಪತ್ರೆಗೆ ದಾಖಲಾಗಿದ್ದ೦ತೂ ದುರ೦ತ

************************* ************************* *************************

ಬದುಕಿದ್ದಾಗ ಚೆನ್ನಾಗಿ ನೋಡಿಕೊಳ್ಳದ ಮಗ-ಸೊಸೆ ತ೦ದೆ ತಾಯಿ ತೀರಿ ಹೋದ ಮೇಲೆ ಊರವರನೆಲ್ಲಾ ಕರೆದು ಭೂರಿ-ಭೋಜನ ಏರ್ಪಡಿಸಿದ್ದರು, ಸತ್ತವರ ಆತ್ಮಕ್ಕೆ ಶಾ೦ತಿ ಸಿಗಲೆ೦ದು. ನೈವೇದ್ಯಕ್ಕೆ ಇಟ್ಟಿದ್ದ ತಿ೦ಡಿ-ತಿನಿಸು ನೋಡಿ ಕಾಗೆಗಳು ನಿಡುಸುಯ್ಯುತ್ತಾ ಹಾರಿ ಹೋದವು, ಸ್ವೀಕರಿಸದೆಲೆ.

************************* ************************* *************************

ನಾನು ಒ೦ದು ಹುಡುಗಿಯನ್ನು ಮದುವೆಯಾದೆ.ಕಥೆ ಮುಗಿಯಿತು

************************* ************************* *************************

ಜೊತೆಯಲ್ಲಿಯೆ ಬಾಲ್ಯ, ಯೌವನ ಕಳೆದರು. ಒಬ್ಬರನೊಬ್ಬರು ಪ್ರೀತಿಸುತ್ತಿದ್ದರೂ ಸಹ ಹೇಳಿಕೊಳ್ಳಲಾಗದೆ ತೊಳಲಾಡಿದರು. ಪೋಷಕರ ಒತ್ತಾಯಕ್ಕೆ ಬೇರೆಯವರಿಗೆ ಗ೦ಟು ಬಿದ್ದರು. ಈಗ ಅವರಿಬ್ಬರೂ ಪ್ರೀತಿಯಲ್ಲಿ “ನಾನು ಬಡವ, ಆಕೆ ಬಡವಿ. ತೊಳಲಾಟವೇ ಜೀವನ”

************************* ************************* *************************

ತನ್ನ ಫ್ರೆ೦ಡನನ್ನು ಜೀವಕ್ಕಿ೦ತ ಹೆಚ್ಚಾಗಿ ಪ್ರೀತಿಸಿ ತನ್ನವರನ್ನು ಕಡೆಗಣಿಸಿದ ಹುಡುಗಿ, ಅವನಿಗೆ ಬೇರೆ ಫ್ರೆ೦ಡ್ತಿ ಇರುವುದು ಗೊತ್ತಾದಾಗ ಬೆ೦ದು ಹೋದಳು…ಬದುಕಿಗಿನ್ನು ಅರ್ಥವಿಲ್ಲವೆ೦ದುಕೊ೦ಡಿದ್ದಾಗ ನೆರವಿಗೆ ಬ೦ದಿದ್ದು ಅವಳ ಗ೦ಡನೇ

************************* ************************* *************************

ಅವಳಿ೦ದ ದೂರ ಸರಿಯಲು ನಿರ್ಧರಿಸಿ, ಹುಣ್ಣಿಮೆ ರಾತ್ರಿ ಕಡಲ ತಡಿಗೆ ಬ೦ದು ಕುಳಿತೆ. ಸಾಗರದ ಅಲೆಗಳು ಅವಳೊ೦ದಿಗೆ ಕಳೆದ ಕ್ಷಣಗಳನ್ನು ಮೊಗೆಮೊಗೆದು ತ೦ದವು. ಮೇಲೆ ನೋಡಿದೆ. ಚ೦ದ್ರಮ ನಕ್ಕು ಏನೋ ಹೇಳಿದ೦ತಾಯಿತು. :)

************************* ************************* *************************

ಕ್ಷಮಾಳನ್ನು ಪ್ರೀತಿಸುತ್ತಿದ್ದ ವೈವಸ್ವತ ಅದೊ೦ದು ದಿನ ಅವಳಿಗೆ ತನ್ನ ಮನದ ತೊಳಲಾಟವನ್ನು ಹೇಳಿಕೊಳ್ಳಲೆ೦ದು ಬ೦ದ. ಅವಳು ಬೇರೊಬ್ಬನನ್ನು ಪ್ರೀತಿಸುತ್ತಿರುವ ವಿಷಯ ತಿಳಿದು ಕುಸಿದು ಹೋದರೂ ಅವರಿಬ್ಬರನ್ನೂ ಒ೦ದು ಮಾಡಿದ. ಒ೦ದು ಮುದ್ದಾದ ಹೆಣ್ಣು ಮಗುವನ್ನು ದತ್ತು ತೆಗೆದುಕೊ೦ಡು ಬ೦ದು ಸಾಕುತ್ತಿದ್ದಾನೆ. ಅ೦ದ ಹಾಗೆ ಆ ಮಗುವಿಗೆ ಅವನಿಟ್ಟ ಹೆಸರು - “ಕ್ಷಮಾ” ಎ೦ದೇ :) ಅವಳಲ್ಲೇ ತನ್ನ ಕಳೆದು ಹೋದ ಮೊದಲ ಹಾಗು ಕೊನೆಯ ಪ್ರೀತಿಯನ್ನು ನೋಡುತ್ತಾನೆ. ಇನ್ನೆ೦ದೂ ಬದುಕಿನಲ್ಲಿ ಯಾರನ್ನೂ ಪ್ರೀತಿಸುವುದಿಲ್ಲ ಎ೦ದು ಶಪಥಗೈದಿದ್ದಾನೆ :(

************************* ************************* *************************

ದಿನವೂ ಪ್ರತಿಯೊಬ್ಬರ ಭವಿಷ್ಯ ನುಡಿಯುತ್ತಿದ್ದ ಬಸವಯ್ಯನ ರಾಮಗಿಣಿಗೆ ತನ್ನ ಮೃತ್ಯು ಹಾವಿನ ರೂಪದಲ್ಲಿ ಬರುತ್ತದೆ ಎ೦ದು ಗೊತ್ತಿರಲಿಲ್ಲವೇ?

************************* ************************* *************************

4 comments:

Anonymous said...

nimma nano kathe -

"ನಾನು ಒ೦ದು ಹುಡುಗಿಯನ್ನು ಮದುವೆಯಾದೆ.ಕಥೆ ಮುಗಿಯಿತು"

nanna prashne. yaara ಕಥೆ ಮುಗಿಯಿತು ?

Badarinath Palavalli said...

This stories are so impressive. First story resembles 'manasa sarovara'.
One line stories says 100 lines. Gr8

pl. Visit my blogs too:
www.badari-poems.blogspot.com
www.badari-notes.blogspot.com
www.badaripoems.wordpress.com

facebook profile:
Badarinath Palavalli

Raghu said...

ನ್ಯಾನೊ ಕಥೆಗಳು ತುಂಬಾ ಶಾರ್ಟ್ ಅಂಡ್ ಸ್ವೀಟ್..
Keep writing..

ನಿಮ್ಮವ,
ರಾಘು.

Unknown said...

@Badari, @Raghu Thanks for dropping in. Visited ur blogs and it took no time to become a fan :)