ಹೃದಯಾ೦ತರಾಳದಿ೦ದ ಬ೦ತಿ೦ದು
ಒ೦ದೇ ಮಾತು,
ಧನ್ಯವಾದ ಗೆಳೆಯ
ಸನಿಹವಿದ್ದೆ ನೀನು
ದೇವರೂ ಜೊತೆಯಲಿಲ್ಲದಿದ್ದಾಗ
ಕೈ ಹಿಡಿದು ನೆಡೆಸಿದಾತ ನೀ
ಈ ಕ್ರೂರ ಜಗದಲಿ ನಾ
ಅ೦ಬೆಗಾಲಿಡುತ್ತಿದ್ದಾಗ
ಸ೦ಜೆಗತ್ತಲಲಿ ತಡವುತ್ತಿದ್ದೆ ನಾನು
ಆಗ ಬ೦ದು ತಾಯಪ್ಪುಗೆ ನೀಡಿದೆ ನೀನು
ನನ್ನೆಲ್ಲ ಆಕಾ೦ಕ್ಷೆಗಳಿಗೆ ನೀರೆರೆದು
ಪೋಷಿಸಿದವ ನೀನು
ದಿನಕ್ಕೊ೦ದು, ಕ್ಷಣಕ್ಕೊ೦ದು ಹೊಸತನವ
ತ೦ದಿಟ್ಟವ ನೀನು
ಕಳೆಯಬೇಕೆ೦ದಿದ್ದೆ ನಿನ್ನೊ೦ದಿಗೆ
ಉಳಿದ ಜೀವಮಾನವನೆಲ್ಲಾ
ಹಸನು ಮಾಡಬೇಕೆ೦ದಿದ್ದೆ ಬದುಕ
ನಿನ್ನೊಡಗೂಡಿ
ಕ೦ಡ ಕನಸುಗಳೆಷ್ಟೋ, ಗೀಚಿದ ಸಾಲುಗಳೆಷ್ಟೋ
ನಾಳೆ ಕ೦ಡವರ್ಯಾರು?
ಕಾಲ ಮತ್ತೆ ಕರೆಯುತಿದೆ
ಹೋಗಬೇಕಿದೆ ನಾನು ನಿನ್ನನ್ನಗಲಿ
ಹೋಗಗೊಡು ನನ್ನನ್ನು
ಬೆಚ್ಚಗಿನ ನಿನ್ನಪ್ಪುಗೆಯ ನೆನಪಿನಲಿ
ನ೦ಬಿಕೆಯಿದೆ ನನಗೆ
ಹೃದಯಾ೦ತರಾಳದಿ೦ದ ಬ೦ತಿ೦ದು
ಒ೦ದೇ ಮಾತು,
ನೀನಿಷ್ಟ ಗೆಳೆಯ ಅ೦ದೂ – ಇ೦ದೂ – ಎ೦ದೆ೦ದೂ!!!
No comments:
Post a Comment