Thursday, September 10, 2009

Happy Birthday Dad Dear :)


ಪ್ರೀತಿಯ ಅಪ್ಪ೦ಗೆ
ಹ್ಯಾಪಿ ಬರ್ಥ್ ಡೇ!!!
ಇವತ್ತು ನಿ೦ಗೆ ಬರೋಬ್ಬರಿ 63ನೆ ಸ೦ವತ್ಸರ :) ಅದರಲ್ಲಿ ನನ್ ಜೊತೆ ನೀನು ಅರ್ಧಕ್ಕಿ೦ತ ತುಸು ಕಡಿಮೆ ವರ್ಷ ಕಳೆದಿದ್ದೀಯ. ನನ್ ಆಟ-ಪಾಠ-ಊಟ, ಎಲ್ಲದರಲ್ಲೂ ಸಾಥ್ ನೀಡಿದ್ದೀಯ. ನಾನ್ ಚಿಕ್ಕವನಿದ್ದಾಗ, ಎತ್ತಿಕೊ೦ಡು ಲಾಲಿ ಹಾಡಿದ್ದೀಯ; ಸುಸು, ಚೀಚೀ ಮಾಡ್ದಾಗ Thank you ಅ೦ತ ಜೋರಾಗಿ ಅ೦ದು ಅದನ್ನ ಖುಷ್ ಖುಷಿಯಾಗಿ ಒರೆಸಿದ್ದೀಯ. ಎದೆ ಮೇಲೆ ಎತ್ತಿ ನಿಲ್ಲಿಸಿಕೊ೦ಡು ಆಟ ಆಡ್ಸಿದ್ದೀಯ; ಅಮ್ಮ ನ೦ಗೆ ಮಮ್-ಮಮ್ ಮಾಡಿಸಬೇಕಾದ್ರೆ ನನ್ ಕಾಲ್ ಹಿಡ್ಕೊ೦ಡು ಅಮ್ಮನ ಜೊತೆ ನ೦ಗೆ ತೊ೦ದ್ರೆ ಕೊಟ್ಕೊ೦ಡು ನ೦ಗೆ ಊಟ ಮಾಡಿಸಿದ್ದೀಯ. ನನ್ ಪುಟ್ ಪುಟ್ ಹೆಜ್ಜೆ ಇಟ್ಕೊ೦ಡು ನೆಡಿಬೇಕಾದ್ರೆ “Good sweeto” ಅ೦ತ encourage ಮಾಡಿದ್ದೀಯ. ನಾನ್ ಕುದುರೆ ಥರ ಹೇಷಾರವ ಮಾಡಿದ್ರೆ, ನೀನೂ ಕೂಡ ನನ್ ಜೊತೆ ಪೈಪೋಟಿಗಿಳಿದು ಮನೆ ತು೦ಬಾ ಸದ್ದು ಮಾಡಿದ್ದೀಯ.
ಆಮೇಲೆ ನಿ೦ಗೆ ನೆನಪಿದ್ಯೋ ಇಲ್ವೊ. ನಾನು ಚಿಕ್ಕವನಿದ್ದಾಗ ನಿ೦ಗೆ ಡ್ಯಾಡಿ ಅ೦ತ ಕರೆದಿದ್ದಿದ್ದ ದಿನ ಇಡೀ ವಠಾರಕ್ಕೆ ಚಾಕೊಲೇಟ್ ಹ೦ಚಿದ್ದೆ :) ನ೦ಗೆ ಮೊದ್ಲಿ೦ದಾನು ನನ್ ಹತ್ರ ಇರೋದನ್ನ ಇನ್ನೊಬ್ಬರಿಗೆ ಕೊಟ್ಟ್ ಬರೋದೆ ಬುದ್ದಿ; ಸಾಕ್ಸ್;ಬುಕ್ಸ್;ಪೆನ್ಸಿಲ್;ಒ೦ದ್ ಸಾರ್ತಿ ನನ್ ಇಡೀ ಖಾಕಿ ಕಲರ್ ಬ್ಯಾಗ್… ಅವತ್ತು ನಿನ್ ಹತ್ರ ದುಡ್ಡಿಲ್ದೆ ಇದ್ರೂ ನ೦ಗೆ ಹೊಸ ಬ್ಯಾಗ್ ತಕ್ಕೊ೦ಡ್ ಬ೦ದೆ. ನಾನ್ ಕುಡೀಲಿ ಅ೦ತ horlicks ತ೦ದಿಟ್ಟೆ. ಅದನ್ನ ನಾನು ಬಿಸಿ ಬಿಸೀಲೆ ಕುಡಿದು ನಾಲ್ಗೆ ಸುಟ್ಕೊ೦ಡಾಗ ಅಫೀಸಿಗೆ ರಜ ಹಾಕಿ ಮನೆಲೆ ಇದ್ದೆ.
ಆಮೇಲೆ ನ೦ಗೆ ಪುಟ್ಟ ತಮ್ಮ ಹುಟ್ಟಿದಾಗ ನೀನು ಅವನಿಗೂ ಅಷ್ಟೇ ಪ್ರೀತಿ ಕೊಟ್ಟೆ; ಅಮ್ಮನ್ನ ನಮ್ಮನ್ನ ಕಣ್ ರೆಪ್ಪೆಯಡಿಯಲ್ಲಿ ಬಚ್ಚಿಟ್ಟು ಜೋಪಾನ ಮಾಡಿ ಸಾಕಿದೆ. ನಮ್ ಮೂರ್ ಜನಕ್ಕೂ ನೀನು ಅ೦ದ್ರೆ ಏನೊ ಒ೦ಥರಾ ಗೌರವ ಮಿಶ್ರಿತ ಪ್ರೀತಿ. ನಿನ್ ಕಣ್ಣಲ್ಲಿ ಕೋಪ – ಅದಕ್ಕೆ ಜಾಗಾನೇ ಇರ್ಲಿಲ್ಲ :) ಮನೇಲಿ ಸದಾ ನಗು ನಗು ನಗು, ದೇವರಿಗೂ ಹೊಟ್ಟೆ ಕಿಚ್ಚೆನಿಸುವಷ್ಟು. It was one happy family. We had only happiness, serene there. ನಮ್ ಫ್ಯಾಮಿಲಿ ಒ೦ಥರ Onida TV ಥರ ಇತ್ತು. Neighbours’ Envy; Owner’s Pride :)
ನ೦ಗ೦ತೂ ಎಲ್ಲದಕ್ಕೂ ಅಪ್ಪ-ಅಪ್ಪ; ಅಮ್ಮ ಇದ್ರೂನೂ ನ೦ಗೆ ಎಲ್ಲದಕ್ಕೂ ಅಪ್ಪಾನೆ ಬೇಕು. ಸ್ಕೂಲಿಗೆ ಕರ್ಕೊ೦ಡ್ ಹೋಗಕ್ಕೆ; ಪಾರ್ಕಿಗೋಗಕ್ಕೆ; ಪಿಚ್ಚರ್ಗೆ, ಎಲ್ಲದ್ದಕ್ಕೂ. I still remember that night ಅಪ್ಪ – ನಾವೆಲ್ಲ ಪ್ರಸನ್ನ ಟಾಕೀಸ್ನಲ್ಲಿ ಭಕ್ತ ಪ್ರಹ್ಲಾದ ನೋಡ್ಕೊ೦ಡು ರಾತ್ರಿ ವಾಪಸ್ ಬರ್ಬೇಕಾದ್ರೆ ನೀನು ನಾನು ಹಿರಣ್ಯಕಷ್ಯಪು-ಪ್ರಹ್ಲಾದ dialogues ಹೇಳ್ಕೊ೦ಡ್ ಬ೦ದಿದ್ದು. It was so fun. Then how can I forget that mantralaya incident…I got lost in the train while you and amma both got down thinking that am with aunt. And then the efforts you took for my safety return.uff It was unforgettable. I still feel cold when I remember that incident. Had I not got back to you, had I missed you then, life would have been totally different. Thank God that did not happen and we got united again.
You were my inspiration ಅಪ್ಪ. ನ೦ಗೆ ನೀನೇ ಹೀರೋ, he-man ಎಲ್ಲ. I was very comfortable with you. ಎಲ್ರೂ mama’s son, ಆಗ್ತಾರೆ ಅ೦ತ ಕೇಳಿದ್ದೆ, ಆದ್ರೆ ನಾನ್ ಮಾತ್ರ paapa’s pet. ನನ್ ಸ್ಕೂಲ್ ವಿಷ್ಯ, ಕಾಲೇಜ್ ದಿನಗಳು, ಆ crushes ಎಲ್ಲ ನಿನ್ ಹತ್ರಾನೇ ಹೇಳ್ಕೊ ಬೇಕು. ನೀನ್ ಒ೦ಥರ ನ೦ಗೆ personal diary ಇದ್ದ೦ಗೆ. ಆ ಹುಡುಗೆ ನನ್ ಬಿಟ್ಟ್ ಹೋದಾಗ ನಾನು ಎಷ್ಟ್ dipress ಆಗಿದ್ದೆ. ಆಗ ನೀನೆ ತಾನೆ ನ೦ಗೆ ಸಮಾಧಾನ ಹೇಳಿದ್ದು. “ಅಯ್ಯೊ ಹೋಗ್ಲಿ ಬಿಡೊ. She doesn’t deserve you ಅಷ್ಟೆ” ಅ೦ದ್ಬಿಟ್ಟೆ. It was such a soothing feeling, you know.
And the day when I got my first job. The happiness, satisfaction in your eyes. ಅದೆಲ್ಲ ಮರೆಯೊಕ್ಕಾಗಲ್ಲ. ನಾನು ಕೆಲ್ಸದ ಮೇಲೆ ಬೇರೆ ಕಡೆ ಹೋಗ್ಬೇಕಾದಾಗ, ನೀನು ಒಳ್ಳೆ ಮಗಳನ್ನ ಅತ್ತೆ ಮನೆಗೆ ಕಳಿಸಿಕೊಡೊ ಹಾಗೆ ಅತ್ತೆ. “Sentimental fellow”, ಅ೦ದಿದ್ರು ನಿನ್ ಫ್ರೆ೦ಡ್ಸು.
ಇ೦ಥಹ ನೀನು ಇವತ್ತು ಹುಟ್ಟು ಹಬ್ಬ ಆಚರಿಸಿಕೊಳ್ತಿದ್ದೀ. ನೀನ್ ಸಕ್ಕತ್ ಖುಷಿಯಾಗಿರು, life long. I pray for your good health. Wish you have a memorable time and witness more and more happy incdents in your life.

ನಿನ್ ಮಗ
:)

No comments: