ನೀನಿಲ್ಲದಿದ್ದರೆ,
ನಾನೂ ಇರ್ತೀನಿ
ಬದುಕೂ ಇರುತ್ತೆ
ಆದರಿರದಿರೋದ೦ದ್ರೆ
ಅದಕಿದ್ದ ಅರ್ಥ ಮಾತ್ರ
~ * ~
ಕಣ್ಣೆದುರಿಗೆ ನೀನಿರುವಾಗ
ಕಣ್ಣೀರೆ೦ಬುದು
ಕನ್ನಡಿಯೊಳಗಿನ ಗ೦ಟು
~ * ~
ನಿನ್ನೊ೦ದಿಗಿನ ಗೆಳೆತನದಲ್ಲಿ
ಏನು೦ಟು ಏನಿಲ್ಲ
ಮನ ಕೆಲವೊಮ್ಮೆ
ಹಗುರಾತೀ ಹಗುರ
ಒಮ್ಮೊಮ್ಮೆ ಭಾರ
ಜೊತೆ ಇದ್ದಾಗ ನೀ
ಕಣ್ಣಲ್ಲಿ ನಗು ಅಲೆ ಅಲೆ
ಇಲ್ಲದಿದ್ದರೆ
ನಯನ ಕಮ೦ಡಲ
ಬಲು ಸು೦ದರವೀ ಸ್ನೇಹ
ಸರಳ ಸು೦ದರ
ವಿರಳ ವಿರಳ
~ * ~
2 comments:
Hi sreeharsha...
kavana thumba chennagidhe...these kavana represents my feelings thanks...for wonderfull kavana
@ Sachi,
You r welcome :)
~ Harsha
Post a Comment