Friday, August 01, 2008

ಹಿಡಿ ಮುಷ್ಠಿಯೊಳಗೆ

ಕುಡಿ ಜೀವದೊಳಗೆ

ಮುಚ್ಚುಗೆಯ ಮನದೊಳಗೆ

ಈಗಿರುವುದು ಕೇವಲ

ನೀನು, ಆ ನಗು

ಮಧುರಾತಿ ಮಧುರ

ನೆನಪುಗಳ ಆಗರ

- ~ -

ಪ್ರೇಮಿಗಳ ವಿರಹ ವೇದನೆ

ತಾಳಲಾರದ ವರುಣ

ತಾ ಸುರಿಸಿದ ಅಶ್ರುಧಾರೆ

- ~ -

ನೀನಿಲ್ಲದಿದ್ದರೂ

ನಿನ್ಮೇಲಿರುವುದೆನಗೆ

ಸದಾ ಸದಭಿಮಾನ;

ಪ್ರತೀ ಕವಿತೆಯಲ್ಲೂ

ನೀನೇ

ಉಪಮೇಯ

- ~ -

ಮೊದಲ ದಿನ

ನಿನ್ನ ಮೇಲಿದ್ದ ಕೋಪವೀಗ

ನೇಸರನಿಗೆ ಎದೆಯೊಡ್ಡಿದ

ಮ೦ಜಿನ ಗುಡ್ಡೆ

~ ಹರ್ಷ

2 comments:

ತೇಜಸ್ವಿನಿ ಹೆಗಡೆ said...

ತಿಳಿಗೊಳ ಈಗ ತುಂಬಾ ತಿಳಿಯಾಗಿ ಕಂಗೊಳಿಸುತ್ತಿದೆ. ಸುಂದರ ಚಿತ್ರ :)

Ranjita said...

ತುಂಬಾ ಚೆನ್ನಾಗಿವೆ .. :)