ನೀನಿಲ್ಲದಿದ್ದರೆ
ಈ ಸು೦ದರ ಬಾಳು ನನದಾಗುತ್ತಿರಲಿಲ್ಲ
ಕಾಜಾಣದ ಕೂಗಿಗೆ ಮನ ನಲಿಯುತ್ತಿರಲಿಲ್ಲ
ಬೆಟ್ಟ, ಗುಡ್ಡಗಳ, ಗುಡಿ ಗೋಪುರಗಳ ಪರಿಚಯ
ಎನಗಾಗುತ್ತಿರಲಿಲ್ಲ
ನೀನಿಲ್ಲದಿದ್ದರೆ
ಬದುಕು ಇಷ್ಟೊ೦ದು ಸಹನೀಯವಾಗಿರುತ್ತಿರಲಿಲ್ಲ
ನೋವಿನಲ್ಲೂ ನಲಿವಿನ ಮೊಗವಾಡ ***
ನನಗೆ ತೊಡಲಾಗುತ್ತಿರಲಿಲ್ಲ
ಪ್ರತಿ ಸೋಲಿಗೂ ಗೆಲುವಿನ ಸೋಪಾನ
ಹಾಸಲಾಗುತ್ತಿರಲ್ಲಿಲ್ಲ
ನೀನಿಲ್ಲದಿದ್ದರೆ
ಹೃದಯವೆ೦ಬ ಗೂಡು ಬರಿದಾಗಿರುತಿತ್ತಲ್ಲ.
ಕಾರಿರುಳಿನಲ್ಲೂ ಬೆಳಕ ಹುಡುಕುವ
ಪ್ರಯತ್ನ ನನ್ನದಾಗುತ್ತಿರಲ್ಲಿಲ್ಲ.
ನೀನಿಲ್ಲದಿದ್ದರೆ
ಈ ನಾನು ನಾನಾಗಿರುತ್ತಿರಲ್ಲಿಲ್ಲ
-------------------------------------------------
ಅ೦ತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅ೦ಗವಾಗಿ ನಮ್ಮ ಬದುಕಿನಲ್ಲಿ ಹಾದುಹೋದ / ಹಾಸು ಹೊಕ್ಕಾಗಿರುವ, ಎಲ್ಲಾ ಹೆಣ್ಣಿಗೂ ಈ ಕವಿತೆಯಲ್ಲದ ಕವಿತೆ ಅರ್ಪಣ.
ವೈಯಕ್ತಿಕವಾಗಿ ನನ್ನ ಅಮ್ಮನಿಗೆ ಇದು ಅರ್ಪಿತ
*** Thanks, Shiv, for correcting this line
2 comments:
ಹರ್ಷ,
>ನಲಿವಿನಲ್ಲೂ ನೋವಿನ ಮೊಗವಾಡ
ನನಗೆ ತೊಡಲಾಗುತ್ತಿರಲಿಲ್ಲ
ಇದು ನೋವಿನಲ್ಲೀ ನಲವಿನ ಮೊಗವಾಡ ಅಂತಾ ಇರಬೇಕಿತ್ತೆ??
Mistake Mistake....
ಖ೦ಡಿತಾ ಇದು ನನ್ನ ತಪ್ಪು. ಧನ್ಯವಾದ Shiv, ತಪ್ಪು ಸರಿ ಮಾಡಿದಿಕ್ಕಾಗಿ.
~ಹರ್ಷ
Post a Comment