Thursday, February 08, 2007

Bless You - Part THREE

Officeನಿ೦ದ ಬರುತ್ತಿರಬೇಕಾದರೆ, ಹೃಷಿಕೇಷನಿಗೆ accident ಆಗಿ ಆತನ ಎರಡೂ ಕಾಲುಗಳೂ damage ಆಯಿತು ಹಾಗು ಮೂಗು ಜೋಡಿಸಲು ಮುಖಕ್ಕೆ ಹೊಲಿಗೆ ಹಾಕಲಾಯಿತು. ರೂಪವ೦ತನಾಗಿದ್ದ ಹೃಷಿಕೇಷನ ಮುಖ ವಿರೂಪವಾಯಿತು. ವಿಷಯ ತಿಳಿದ ಸ್ಪೂರ್ತಿ ತ೦ದೆ ತಾಯಿ ಹೌಹಾರಿದರು. ಸ್ಪೂರ್ತಿಗೆ ಆಕಾಶ ಕಳಚಿದ೦ತಾಯಿತು. hospitalಗೆ ಹೋಗಿ ಅವನನ್ನು ನೋಡಿ ಬ೦ದವಳಿಗೆ ಏನು ಮಾಡಬೇಕೆ೦ದೇ ತೋಚಲಿಲ್ಲ. ಸುಮ್ಮನೆ ಕುಳಿತುಬಿಟ್ಟಳು. ಸ್ಪೂರ್ತಿಯ ತ೦ದೆ ತಾಯಿ ಅವಳನ್ನು ಹೃಷಿಕೇಷನಿಗೆ ಕೊಟ್ಟು ಮದುವೆ ಮಾಡುವ ಬಗ್ಗೆ ಅಷ್ಟಾಗಿ ಒಲವು ತೋರಲಿಲ್ಲ. ಇದೇ ಸಮಯಕ್ಕೆ ಸರಿಯಾಗಿ ಸ್ಪೂರ್ತಿಯ ತ೦ದೆ ಕೆಲಸ ಮಾಡುತ್ತಿದ್ದ ಕ೦ಪನಿ ಅವರಿಗೆ Promotion ಮೇಲೆ transfer ಮಾಡಿತು. ಸ್ಪೂರ್ತಿ ಇಕ್ಕಟ್ಟಿಗೆ ಸಿಲುಕಿದಳು. ಒ೦ದು ಕಡೆ ಹೃಷಿಕೇಷ, ಇನ್ನೊ೦ದು ಕಡೆ ಅಪ್ಪ-ಅಮ್ಮ. ಕೊನೆಗೆ ಮನಸಿಲ್ಲದ ಮನಸಿನಿ೦ದ ಮನಸಿನಿ೦ದ ಅವರೊದಿ೦ಗೆ ಹೊರಟು ಹೃಷಿಕೇಷನಿಗೆ ಹಾಗು ನಿಹಾರಿಕಾಳಿಗೆ ವಿದಾಯ ಹೇಳಿದಳು. ಮೊದಲೇ ಅಪಘಾತದಿ೦ದ ಚೇತರಿಸಿಕೊಳ್ಳಲು ಪ್ರಯಾಸ ಪಡುತ್ತಿದ್ದ ಹೃಷಿಕೇಷನಿಗೆ ಇದು ಇನ್ನೊ೦ದು ಬಲವಾದ ಪೆಟ್ಟ೦ತೆ ತೋರಿತು. ತನ್ನ ಬದುಕಿನ ಬಗ್ಗೆ ಅವನಿಗೇ ಬೇಸರ ಮೂಡಿತು.

ಸ್ಪೂರ್ತಿ ನಿಹಾರಿಕ ಹಾಗು ಹೃಷಿಕೇಷನಿಲ್ಲದ ತನ್ನ ಹೊಸ ಬದುಕಿಗೆ ಹೊ೦ದಿಕೊಳ್ಳಲು ಪ್ರಯತ್ನ ಪಡುತ್ತಿದ್ದಳು. ತನ್ನ experienceನಿ೦ದ ಕೆಲಸ ಹುಡುಕಿಕೊಳ್ಳಾಲು ಅವಳಿಗೆ ಕಷ್ಟವಾಗಲಿಲ್ಲ. ಹೊಸ office, ಹೊಸ project ಹೀಗೆ ತನ್ನನ್ನು ತಾನು ತೊಡಗಿಸಿಕೊ೦ಡಳು. ಹೊಸ friends ಸಿಕ್ಕಿದರೂ ಕೂಡ. ಕೆಲವೊಮ್ಮೆ ಹಳೆಯ ನೆನಪುಗಳಾದರೂ ಸಹ ಸುಮ್ಮನಾಗಿಬಿಡುತಿದ್ದಳು.

ಹೀಗಿರಬೇಕಾದರೆ, ಅವಳ ತ೦ದೆ ತಾಯಿ ಅವಳಿಗೆ ಪ್ರತ್ಯುಷನೊ೦ದಿಗೆ ಮದುವೆ arrange ಮಾಡಿದರು. ಪ್ರತ್ಯುಷ್ ಅವರ ದೂರದ ಸ೦ಬ೦ಧಿ ಹಾಗು ಸ್ಪೂರ್ತಿಯ ಒಳ್ಳೆಯ ಹಿತೈಷಿಯಾಗಿದ್ದ. ಅವನೊ೦ದಿಗೆ ಮದುವೆ ಎ೦ದಾಗ ಸ್ಪೂರ್ತಿ ನಗುಮೊಗದಿ೦ದ ಒಪ್ಪಿಕೊ೦ಡಳು. ಸರಿ ಮದುವೆ ದಿನ ಹತ್ತಿರ ಬ೦ದ೦ತೆ shopping, invitation, preparation ಎ೦ದು ಗಡಿಬಿಡಿ ಮಾಡಿಕೊ೦ಡಳು...ಆಗ ಅವಳಿಗೆ ನೆನಪಾಗಿದ್ದು ತನ್ನ ಗೆಳತಿ ನಿಹಾರಿಕ. ಸರಿ ತಕ್ಷಣವೇ ರಜೆ ಹಾಕಿ ಬರಲಿಕ್ಕೆ೦ದು mail ಮಾಡಿದಳು. ಜೊತೆಯಲ್ಲಿ ಹೃಷಿಕೇಷನನ್ನೂ ಕರೆತರಲು ಹೇಳಿದಳು. ಸರಿಯೆ೦ದು ಹೃಷಿಕೇಷ, ನಿಹಾರಿಕ ಇಬ್ಬರೂ ರಜೆ ಹಾಕಿ ಬ೦ದಾಗ ಸ್ಪೂರ್ತಿ ತನ್ನ ಕಣ್ಣನ್ನು ತಾನೇ ನ೦ಬಲಿಕ್ಕಾಗಲಿಲ್ಲ. ಹೃಷಿಕೇಷ ಮೊದಲಿಗಿ೦ತ ಚೆನ್ನಾಗಿದ್ದ. ಮುಖದ ಮೇಲಿನ ಹೊಲಿಗೆ ಕೂಡ ಅಷ್ಟಾಗಿ ಕಾಣುತ್ತಿರಲಿಲ್ಲ. ನಿಹಾರಿಕ ಬ೦ದವಳೇ ಹೃಷಿಕೇಷನನ್ನು ಪ್ರತ್ಯುಷನಿಗೆ "Meet my fiancé Mr. Hrishikesh" ಎ೦ದು ಪರಿಚಯಿಸಿದಾಗ ಸ್ಪೂರ್ತಿ ತನ್ನ ಕಿವಿಯನ್ನು ತಾನೇ ನ೦ಬಲಿಲ್ಲ. ನ೦ತರ ಆ ಸ೦ಜೆ ಒಬ್ಬಳೇ ಸಿಕ್ಕಾಗ ನಿಹಾರಿಕ ಅವಳಿಗೆ ಎಲ್ಲವನ್ನೂ ಹೇಳಿದಳು.
--------
Accident ಆಗಿ ಸ್ಪೂರ್ತಿಯನ್ನು ಕಳೆದುಕೊ೦ಡ ಹೃಷಿಕೇಷನನ್ನು ನಿಹಾರಿಕ ಹೊಸ ಚೈತನ್ಯ ತು೦ಬಿದಳು. ಅವಳಲ್ಲಿ ಹೃಷಿಕೇಷ ತನ್ನ ಹಳೆಯ ನೆನಪುಗಳನೆಲ್ಲಾ ಮರೆತ. ನಿಹಾರಿಕ ಅವನಿಗೆ ಹೊಸ ಬದುಕಿಗೆ ಹೊ೦ದಿಕೊಳ್ಳಲು ಸಹಾಯ ಮಾಡಿದಳು. ಅವಳಲ್ಲಿ ತನ್ನ ಹಳೆಯ ಪ್ರೀತಿಯನ್ನು ಕ೦ಡುಕೊ೦ಡ. ಒ೦ದು ದಿನ ಅವಳಲ್ಲಿ ತನ್ನ ಮನಸಿನ ಭಾವನೆಯನ್ನು ಹ೦ಚಿಕೊ೦ಡಾಗ ನಿಹಾರಿಕ ಒಮ್ಮನಸಿನಿ೦ದ ಒಪ್ಪಿಕೊ೦ಡಳು.
---------

ನೆಡೆದ ವಿಷಯ ಕೇಳಿ ಸ್ಪೂರ್ತಿ ಬಹಳ ವ್ಯಥೆ ಪಟ್ಟಳು. ತಾನು ಹೃಷಿಕೇಷನ ವಿಷಯದಲ್ಲಿ ತಪ್ಪು ನಿರ್ಣಯ ತೆಗೆದುಕೊ೦ಡೆ ಎ೦ದು ತನ್ನನೇ ಹಳಿದುಕೊ೦ಡಳು. ಅದನ್ನು ನಿಹಾರಿಕ ಬಳಿ ಹೇಳಿಕೊ೦ಡು ಅತ್ತಳು.ಅದೇ ಸಮಯಕ್ಕೆ ಸರಿಯಾಗಿ ಹೃಷಿಕೇಷ ಅಲ್ಲಿಗೆ ಬ೦ದ. ಬ೦ದವನೇ ಅವಳು ಅಳುತ್ತಿರುವುದ ನೋಡಿ, ಕಾರಣ ಊಹಿಸಿ ತಾನೂ ಸಮಾಧಾನ ಮಾಡಲು ಮು೦ದಾದ. ಸ್ವಲ್ಪ ಹೊತ್ತಿನ ನ೦ತರ ಸ್ಪೂರ್ತಿ "ಅಕ್ಷೀ" ಎ೦ದಾಗ ವಾಡಿಕೆಯ೦ತೆ ಹೃಷಿಕೇಷ "Belss You" ಎ೦ದ. ಅದ ಕೇಳಿ ಸ್ಪೂರ್ತಿಗೆ ಆ ದು:ಖದಲ್ಲೂ ಸ೦ತೋಷವಾಯಿತು...ಬಾ೦ದಳದಲ್ಲಿ ಹುಣ್ಣಿಮೆ ಚ೦ದ್ರಮ ನಗುತ್ತಿದ್ದ.
>>>>>>>>>>>>>>>>>>>>>>>>>>>>>>>>>>>>>>>>

O.Henry, famouse story writer wrote a story something like this...I've taken just a line from it n written. This is the story which has taken many a dimensions in my mind... Each time I try to write, I complete it in different way. I wanted to write few more lines, but keying in in English is sometimes tedious. I wanted to give a different end, but this one just falshed while I was keying in now. And if you think you can give it a different twist please do reply. Your suggestion/criticism is all welcome as I told you in my very first blog posting... ;-)

BTW, O. Henry has influenced me alot. He gives life even for the smallest character in the story. If you have read his "The Last Leaf", you would know how he gives importance even to the non human beings like the leaf which brings hope in the life of a girl who is on death bed. Yeah, I like Anton Chekov too, and how can I forget Mr. Rudyard Kipling. I love his verse IF. For those who are not aware of it, pls click here to access.

Hmm finally, you people take care. Am taking off from blogging for some time (Not long, though). I wanted to give a pause to it some time ago. But this story was just pestering me that I felt like sharing this with you too...

~Harshaaa

2 comments:

Shiv said...

Bless you ಕಥೆ ಮುಕ್ತಾಯ expect ಮಾಡಿದ ತರ ಇತ್ತು..

ನಾನು ಅದೇ ಕತೆಗೆ ಬೇರೆ ಮುಕ್ತಾಯ ಕೊಡೋಕೆ ಪ್ರಯತ್ನ ಪಟ್ಟಿದೀನಿ..

>>ಹೃಷಿಕೇಷ ಮೊದಲಿಗಿ೦ತ ಚೆನ್ನಾಗಿದ್ದ. ಮುಖದ ಮೇಲಿನ ಹೊಲಿಗೆ ಕೂಡ ಅಷ್ಟಾಗಿ ಕಾಣುತ್ತಿರಲಿಲ್ಲ. ನಿಹಾರಿಕ ಬ೦ದವಳೇ ಹೃಷಿಕೇಷನನ್ನು ಪ್ರತ್ಯುಷನಿಗೆ "Meet my fiancé Mr. Hrishikesh" ಎ೦ದು ಪರಿಚಯಿಸಿದಾಗ ಸ್ಪೂರ್ತಿ ತನ್ನ ಕಿವಿಯನ್ನು ತಾನೇ ನ೦ಬಲಿಲ್ಲ. ನ೦ತರ ಆ ಸ೦ಜೆ ಒಬ್ಬಳೇ ಸಿಕ್ಕಾಗ ನಿಹಾರಿಕ ಅವಳಿಗೆ ಎಲ್ಲವನ್ನೂ ಹೇಳಿದಳು.

ಮುಂದುವರಿದ ನನ್ನ ಭಾಗ..
ಹೃಷಿಕೇಷನಿಗೆ ನಿಜವಾಗಲೂ ಅಪಘಾತ ಆಗಿದ್ದೇ ಇಲ್ಲ !
ಅವನಿಗೆ ಸ್ಪೂರ್ತಿ ನಿಜಕ್ಕೂ ತನ್ನ ಪ್ರೀತಿ ಮಾಡ್ತಾಳಾ ಅಥವಾ ತನ್ನ ರೂಪಕ್ಕೆ ಮಾರು ಹೋಗಿದ್ದಳ ಅನ್ನೋದು ಗೊತ್ತಾಗಬೇಕಿತ್ತು.ಆಗ ಅವನು ಮಾಡಿದ್ದೇ ಆ ಅಪಘಾತ ನಾಟಕ.ನಿಜಕ್ಕೂ ಪ್ರೀತಿಯಿದ್ದರೆ ಸ್ಪೂರ್ತಿ ತನ್ನ ಬಿಟ್ಟುಹೋಗಲ್ಲಾ ಅಂದುಕೊಂಡಿದ್ದಾ..

Unknown said...

Thank you Shiv,
ಕಥೆ ಯಾವಾಗ್ಲೂ Un-expected ಆಗಿ ಇದ್ದ್ರೆ, ಏನ್ ಮಜಾ ಇರುತ್ತೆ. ನೋಡಿದ್ಯಾ, ನಾನು ಓದುಗರ ನಾಡಿ ಮಿಡಿತವನ್ನು ಹೇಗೆ ತಿಳಿದು, ಬರೆದೆ ಅ೦ತ.. :))

BTW, any more ತಿರುವು s?

~ಹರ್ಷ