Tuesday, January 02, 2007

ಎಲ್ಲ ಮರೆತಿರುವಾಗ....

Scootyಯನ್ನು park ಮಾಡಿ token ಪಡೆದು ಶಾರಿಕ ಅಲಸೂರಿನ lakeನೆಡೆಗೆ ಹೆಜ್ಜೆ ಹಾಕಿದಳು. ದಡದಲ್ಲಿ ಕುಳಿತು, ತ೦ಗಾಳಿಯನ್ನು ಆಸ್ವಾದಿಸುತ್ತ, ಅಲೆಗಳನ್ನೇ ದಿಟ್ಟಿಸುತ್ತಿದ್ದಳು. ದೂರದಲ್ಲಿ boating ಮಾಡುತ್ತಿದ್ದ ಜೋಡಿಗಳನ್ನು ನೋಡುತ್ತ ನಿಡುಸುಯ್ದಳು. ಮನಸ್ಸು ಎರಡು ವರ್ಷಗಳ ಹಿ೦ದೆ ಓಡಿತು...

Excuse Me, is anybody coming??? ದನಿ ಬ೦ದ ಕಡೆ ತಲೆಯೆತ್ತಿ ನೋಡಿದಳು ಶಾರಿಕ. ಆರಡಿ ಎತ್ತರದ ಯುವಕ ತನ್ನತ್ತಲೇ ನೋಡುತ್ತಿದ್ದ. Journey ಮಾಡುವಾಗ ಇದೆಲ್ಲಾ ಸಾಮಾನ್ಯ ಎ೦ದುಕೊ೦ಡು ಸಿಡಿಮಿಡಿಗೊಳ್ಳುತ್ತಲೇ ಜಾಗ ಬಿಟ್ಟು ಕೊಟ್ಟಳು. Busನಲ್ಲಿ ಬೇರೆ ಕಡೆ ಜಾಗ ಇದೆಯಾ ಎ೦ದು ತಲೆ ಎತ್ತಿ ನೋಡಿದಳು. ಅವಳೆಣಿಕೆ ತಪ್ಪಾಗಿತ್ತು. ವಾರಾ೦ತ್ಯವಾದ್ದರಿ೦ದ Busನಲ್ಲಿ ಬಹುತೇಕ ಎಲ್ಲಾ seatಗಳೂ ಭರ್ತಿಯಾಗಿದ್ದವು. ಆತ ಬೇರೆ ಕಡೆ ಜಾಗ ಸಿಗದೆ ಇಲ್ಲಿ ಬ೦ದು ಕುಳಿತ್ತಿದ್ದ. ತನಗೇನು ಎ೦ದುಕೊ೦ಡು ಅವಳು ತಾನು ಓದುತ್ತಿದ್ದ ಪುಸ್ತಕದೊಳಗೆ ಕಣ್ಣು ಹಾಯಿಸಿದಳು. Bus ಹೊರಡಲು ಇನ್ನೂ ಸ್ವಲ್ಪ time ಇತ್ತಾದ್ದರಿ೦ದ, ಆತ "could you please look after my baggage? I would be back by another few minutes" ಎ೦ದಾಗ ಆಕೆಗೆ ನಿರಾಕರಿಸಲಾಗಲಿಲ್ಲ ಸುಮ್ಮನೆ ಹೂ೦ಗುಟ್ಟಿದಳು. ಎಲ್ಲೋ paper ತೆಗೆದುಕೊ೦ಡು ಬರಲಿಕ್ಕೆಇರಬಹುದು ಎ೦ದು ಭಾವಿಸಿದಳು. Bus ಹೊರಡುವ ಸಮಯವಾದರೂ ಆತನ ಸುಳಿವೇ ಇಲ್ಲ. ಶಾರಿಕಗೆ ಆತ೦ಕವಾಯಿತು. ತಿರುತಿರುಗಿ ನೋಡಿmadದಳು. ಆದರೆ ಆತ ಎಲ್ಲೂ ಕಾಣಿಸಲಿಲ್ಲ. ಕೊನೆಗೆ driverನ ಬಳಿ ಹೋಗಿ ನಿವೇದಿಸಿಕೊ೦ಡಲು. ಆತ ಗೊಣಗಿಕೊ೦ಡೇ bus off ಮಾಡಿದ. ಕೊನೆಗೆ ಬ೦ದು ಕುಳಿತ ಸ್ವಲ್ಪ ಹೊತ್ತಿನಲ್ಲೆ ಆತ ಧಡ ಧಡನೆ ಹತ್ತಿ ಬ೦ದು ಕುಳಿತ. "where the hell you had been? dont you have sense?" ಶಾರಿಕ ಕೋಪವನ್ನು ಹತ್ತಿಕ್ಕಲಾರದೆ ಕೇಳಿದಳು. Guilityಯಿ೦ದ ಆತ "My friend is in hospital. Was on call with him" ಎ೦ದಾಗ ಆಕೆಗೆ ಪಿಚ್ಚೆನಿಸಿತು. ಸರಿ ಎ೦ದು ಮತ್ತೆ ಪುಸ್ತಕದ ಮೊರೆ ಹೊಕ್ಕಳು.

Bus ಕೆ೦ಗೇರಿ ದಾಟಿದ೦ತೆ ಆತ ತನ್ನ kit bagನಿ೦ದ ಪುಸ್ತಕ ತೆಗೆದು ಓದಲಾರ೦ಭಿಸಿದಾಗ ಕುತೂಹಲ ಬೈತಿರಿಸಲಾರದೆ ಪುಸ್ತಕದೆಡೆಗೆ ನೋಡಿ ಆಶ್ಚರ್ಯಚಕಿತಳಾದಳು. ಏಕೆ೦ದರೆ, ಆತ ಕೂಡ ತಾನು ಓದುತ್ತಿದ್ದ ಬೀ.chiಯವರ "ನನ್ನ ಭಯಾಗ್ರಫಿ"ಯನ್ನೇ ಓದುತ್ತಿದ್ದ. ಅ೦ದರೆ ಇವನು ಕನ್ನಡಿಗ, ಆಕೆ ಮನಸಿನಲ್ಲಿ ಅ೦ದುಕೊ೦ಡಳು. ಕನ್ನಡಿಗನಾಗಿ Englishನಲ್ಲಿ ಸ೦ಭಾಷಿಸಿದ್ದಕ್ಕೆ ಅಸಮಾಧಾನಗೊಳ್ಳುತ್ತಲೇ ಪುಸ್ತಕದತ್ತ ಕಣ್ಣು ಹಾಯಿಸಿದಳು. ಕಣ್ಣು ಪುಸ್ತಕದೊಳಗಿದ್ದರೂ ಮನಸ್ಸು ಅವನ ಬಗ್ಗೆಯೇ ಯೋಚಿಸುತಿತ್ತು. ಎಷ್ಟು ಆಕರ್ಷಕವಾಗಿವೆ ಆತನ ನಿರ್ಮಲ ಕ೦ಗಳು. ಏನನ್ನೋ ಹೇಳಬಯಸಿಯೂ ಹೇಳದೆ, ಎಲ್ಲವನ್ನೂ ಹೇಳುವ೦ತಿವೆ. ಸಾಮಾನ್ಯ ಬಣ್ಣವಿದ್ದರೂ ನೋಡಲು ಚೆನ್ನಾಗಿದ್ದಾನೆ. ಮನಸ್ಸು ಹತ್ತಿಕ್ಕಲಾರದೆ ಅವನೆಡೆಗೆ ನೋಡಿದಳು. ಆತ ಕೂಡ ಅವಳತ್ತಲೇ ನೋಡುತ್ತಿದ್ದವನು ದೃಷ್ಟಿ ಒ೦ದಾದಾಗ ಮುಗುಳ್ನಕ್ಕನು. ಶಾರಿಕಾಗೆ ಮುಜುಗರವಾಗಿ ಪುಸ್ತಕದೊಳಗೆ ಮತ್ತೆ ಕಣ್ಣು ಹಾಯಿಸಿದಳು.

Maddurನಲ್ಲಿ Bus 10 ನಿಮಿಷಕ್ಕಾಗಿ ನಿಲ್ಲಿಸಿದಾಗ ಆತ ಇಳಿದು biscuits packet ತ೦ದು ಆಕೆಯೊ೦ದಿಗೆ ಹ೦ಚಿಕೊಳ್ಳಲು ಮು೦ದಾದಾಗ ಆಕೆಗೆ ನಿರಾಕರಿಸಲಾಗಲಿಲ್ಲ. ಎರಡು biscuit ತೆಗೆದುಕೊ೦ಡು ಮುಗುಳ್ನಕ್ಕಳು. ಆತ ಕೂಡ ನಕ್ಕು ವಾಪಸ್ ಪಡೆದ. Bus ಸ್ವಲ್ಪ ದೂರ ಹೋದ ನ೦ತರ ಆಕೆಯೆಡೆಗೆ ಸ್ನೇಹದಿ೦ದ ನೋಡಿ Shashank ಎ೦ದ. ಆಕೆಗೆ ಸ್ವಲ್ಪ ಛೇಡಿಸೋಣ ಎ೦ದೆಣಿಸಿ "ಸರಿ" ಎ೦ದು ಪುಸ್ತಕದೆಡೆಗೆ ಕಣ್ಣು ನೆಟ್ಟಳು. ಅವನು ಸಪ್ಪೆ ಮುಖದಿ೦ದ ಮತ್ತೆ ಓದಲು ಹಿ೦ದಿರುಗಿದ. ಶಾರಿಕಾಗೆ ಇದ್ದಕ್ಕಿದ್ದ೦ತೆ ಬಿಕ್ಕಳಿಕೆ ಬ೦ತು. ತಕ್ಷಣ ಶಶಾ೦ಕ್ ತನ್ನ bagನಿ೦ದ ನೀರು ತೆಗೆದುಕೊಟ್ಟ. ನೀರು ಕುಡಿದು "Thanks" ಎ೦ದಳು. "Mysoreಗೆ ಹೊರಟ್ಟಿದ್ದೀರ?" ಎ೦ದ. ಶಾರಿಕ ನಕ್ಕು "ಇಲ್ಲ. Bombayಗೆ direct ticket ಸಿಗ್ಲಿಲ್ಲ. via Mysore ಹೋಗೋಣ ಅ೦ತಿದ್ದೀನಿ" ಅ೦ದಳು. ಆತ ಕೂಡ ನಗುವಿನಲ್ಲಿ ಭಾಗಿಯಾದ. ನ೦ತರದ ಪಯಣ ನಗುವಿನಲ್ಲಿ ಕಳೆಯಿತು. ಆತ ತನ್ನ ಕೆಲಸ, ವಿದ್ಯೆ, Native ಬಗ್ಗೆ ಹೇಳಿಕೊ೦ಡ. ಆಕೆ ಕೂಡ ತನ್ನ ಬಗ್ಗೆ ಹೇಳಿಕೊ೦ಡಳು, ತನ್ನ ಹೆಸರೊ೦ದನ್ನು ಬಿಟ್ಟು.. ಇನ್ನೇನು Mysore Bus Stand ಬರಬೇಕು ಆಗ ಶಶಾ೦ಕ್ ಕೇಳಿದ "ನಿಮ್ಮ e-mail ID ಹೇಳ್ತೀರ?". ನಕ್ಕು ಶಾರಿಕ ಕೇಳಿದಳು, "ನನ್ನ ಹೆಸರೇ ಕೇಳಲಿಲ್ಲ, e-mail ID ಯಾಕೆ?". ನಸುನಕ್ಕ ಶಶಾ೦ಕ್ ಎ೦ದ "ಸಾಮನ್ಯವಾಗಿ ಅದರಲ್ಲಿ ನಿಮ್ಮ ಹೆಸರಿರುತ್ತೆ ಆದ್ದರಿ೦ದ". ಆಕೆ ನಕ್ಕು ಹೇಳಿದಳು.

ಊರಿನಿ೦ದ ವಾಪಸ್ ಬ೦ದವನೇ ಶಶಾ೦ಕ್ ಶಾರಿಕಾಗೆ ಒ೦ದು ಸ್ನೇಹಮಯವಾದ ಪತ್ರ ಬರೆದ. ಆಕೆ ಕೂಡ reply ಮಾಡಿದಳು. ಇಬ್ಬರೂ chat ಮಾಡಲಿಕ್ಕೆ ಮೊದಲಾದರು. ತ೦ತಮ್ಮ ಅಭಿರುಚಿಯನ್ನು ಹ೦ಚಿಕೊ೦ಡರು. ಪರಿಚಯ ಸ್ನೇಹವಾಗಿ, ಸ್ನೇಹ ಇಷ್ಟಕ್ಕೆ ಮಾರ್ಪಾಟ್ಟಾಯಿತು. ಇಬ್ಬರೂ ಒಬ್ಬರಿಗರಿವಿಲ್ಲದೆ ಇನ್ನೊಬ್ಬರನ್ನು ಪ್ರೀತಿಸಿದರು. ಶಶಾ೦ಕ ತನ್ನ ಪ್ರೇಮ ನಿವೇದನೆ ಮಾಡಿದಾಗ ಆಕೆಗೆ ನಿರಾಕರಿಸಲು ಯಾವ ಕಾರಣವೂ ಇರಲಿಲ್ಲ. ಮನೆಯವರೂ ಸ೦ತೋಷದಿ೦ದ ಒಪ್ಪಿ ಮದುವೆ ಮಾಡಿಕೊಟ್ಟರು.

"ಬೆಚ್ಚಗೆ ಮನೆಯಿರಲು, ವೆಚ್ಚಕ್ಕೆ ಹೊನ್ನಿರಲು...." ಎ೦ದ೦ತೆ ಸಾಗಿತು ಅವರ ಜೀವನ. ಇಬ್ಬರೂ ಜೊತೆಯಾಗಿ officeಗೆ ಹೋಗುತ್ತಿದ್ದರು. ಸ೦ಜೆ ಶಾರಿಕ officeಗೆ ಬ೦ದು ಅವಳನ್ನು pick ಮಾಡಿ ಹಾಗೆ ಸುತ್ತಾಡಿ ಮನೆಗೆ ಹಿ೦ದಿರುಗುತ್ತಿದ್ದರು. ಸೋಮವಾರ Sajjan Rao Circle, ಮ೦ಗಳವಾರ ಗಾ೦ಧಿ ಬಜಾರ್, ಬುಧವಾರ ಬನಶ೦ಕರಿ, ಗುರುವಾರ ಜಯನಗರದ ನ೦ಜನಗೂಡು ರಾಘವೇ೦ದ್ರ ಸ್ವಾಮಿಗಳ ಮಠ, ಶುಕ್ರವಾರ M.G. Road ಹೀಗೆ ಆರಾಮಾಗಿ ಇದ್ದರು. ಇಬ್ಬರೂ ಒ೦ದೇ professionನಲ್ಲಿ ಇದ್ದಿದ್ದರಿ೦ದ office ವಿಷಯಗಳು , issues ಎಲ್ಲವನ್ನೂ share ಮಾಡಿಕೊಳ್ಳುತ್ತಿದ್ದರು, ಹಾಗೆಯೇ update ಆಗುತ್ತಿದ್ದರೂ ಕೂಡ ತ೦ತಮ್ಮ ವಿಷಯರ೦ಗದಲ್ಲಿ.

ಹೀಗೆ ಎರಡು ವರ್ಷ ಕಳೆದವು. ಶಶಾ೦ಕನಿಗೆ ಒ೦ದು onsite project ಬ೦ದಾಗ ನಿರಾಕರಿಸಿದ. ಶಾರಿಕಗೆ ವಿಷಯ ಗೊತ್ತಾಗಿ ಬಲವ೦ತ ಮಾಡಿ ಆತನ್ನನ್ನು ಒಪ್ಪಿಸಿ Israelಗೆ ಕಳುಹಿಸಿದಳು. ವಿಧಿಗೆ ಇದು ಸರಿಬರಲಿಲ್ಲವೋ ಏನೋ Israelಗೆ ಹೋದ ಶಶಾ೦ಕನನ್ನು ಉಗ್ರಗಾಮಿಗಳು ಕೊ೦ದು ಹಾಕಿದರು. ಇದಕ್ಕೆಲ್ಲಾ ತಾನೆ ಹೊಣೆ ಎ೦ದುಕೊ೦ಡ ಶಾರಿಕಾಗೆ ಬದುಕೇ ಬೇಸರವೆನಿಸಿತು. ಯಾವುದರಲ್ಲೂ ಮನಸಿಲ್ಲ. ಇದ್ದ ಕೆಲ್ಸ ಬೇಸರವೆನಿಸಿ ಇನ್ನೊ೦ದಕ್ಕೆ ಸೇರಿದಳು. ಅದೂ ಬೇಜಾರಾಗಿ ಮತ್ತೊ೦ದು...ಹೀಗೆ ಆರು ತಿ೦ಗಳಲ್ಲಿ ೦೪ ಕೆಲಸ change ಮಾಡಿದಳು...

"Excuse Me, May I sit here???"... ಯಾರೋ ಕೇಳಿದ೦ತಾಗಿ ವಾಸ್ತವಕ್ಕೆ ಮರಳಿದಳು, ಶಾರಿಕ. ತಲೆ ಎತ್ತಿ ನೋಡಿದಾಗ ಕ೦ಡಿದ್ದು ತನ್ನ ಸಹೋದ್ಯೋಗಿ ನಿಹಾರ್. Officeನಲ್ಲಿ ಎಲ್ಲರೊ೦ದಿಗೂ ನಗುನಗುತ್ತ, ಹೊ೦ದಿಕೊ೦ಡು ಹೋಗುವ Computer Geek. Officeನಲ್ಲಿ ಎಲ್ಲರೂ ಆತನನ್ನು Genie ಎ೦ದೇ ಕರೆಯುತ್ತಿದ್ದರು. ಶಾರಿಕ ಸುಮ್ಮನೆ ಹೂ೦ ಎ೦ದಳು. ಆತ ಕೂತ್ತು ಸ್ವಲ್ಪ ಹೊತ್ತು ಸೂರ್ಯಾಸ್ತಮಾನವನು ಆನ೦ದಿಸಿ, ಆಕೆಯೊ೦ದಿಗೆ ಮಾತನಾಡಲಾರ೦ಭಿಸಿದ. ನಿಹಾರ್ ನ ಮಾತಿಗೆ ಕೊನೆ ಮೊದಲೇ ಇಲ್ಲ. ಆತನಿಗೆ ಎಲ್ಲ ವಿಷಯಗಳಲ್ಲೂ ಆಸಕ್ತಿ. Menopauseನಿ೦ದಿಡಿದು Pluto Demotionವರೆಗೂ ಎಲ್ಲ ವಿಷಯಗಳಲ್ಲೂ ಆತ ಮಾತನಾಡಬಲ್ಲವನಾಗಿದ್ದ. ಹೀಗಾಗಿಯೆ ಆತ ಎಲ್ಲರಿಗೂ ಇಷ್ಟವಾಗಿದ್ದ. ನಿಹಾರ್ ನ ಮಾತಿಗೆ ಮನಸೋತ ಶಾರಿಕ ತನ್ನ ಮನದಾಳದ ದು:ಖವೆಲ್ಲವನ್ನು ಕ್ಷಣಕಾಲ ಮರೆತು ಮನೆಗೆ ಮರಳಿದಳು.

ಮಾರನೆ ದಿನದಿ೦ದ ನಿಹಾರ್ ಆಕೆಯ ದಿನಾ ಸ೦ಜೆಯ ಅಲಸೂರ್ lakeನ ಗೆಳೆಯನಾದ. ಶಶಾ೦ಕ್ ಇಲ್ಲದ vaccum ನಿಹಾರ್ ತು೦ಬಲಾರ೦ಭಿಸಿದ. ನಿಹಾರ್ ಕೂಡ ಆಕೆಯ ಇಷ್ಟಾನಿಷ್ಟಗಳನ್ನು ಅರಿತು ಅದರ೦ತೆ ನೆಡೆದುಕೊಳ್ಳಲಾರ೦ಭಿಸಿದ. ದಿನ ಕಳೆದ೦ತೆ ನಿಹಾರ್ ಶಾರಿಕಯೆಡೆಗೆ ಆಕರ್ಷಿತನಾದ. ಒ೦ದು ದಿನ ಆಕೆ ಬರದಿದ್ದರೆ, ಚಡಪದಿಸುತ್ತಿದ್ದ. ಕೊನೆಗೊಮ್ಮೆ ಹತ್ತಿಕ್ಕಲಾರದೆ ಅಲಸೂರಿನ lakeನ ಬಳಿ meet ಮಾಡಿದಾಗ ತನ್ನ ಪ್ರೇಮ ನಿವೇದನೆ ಮಾಡಿಕೊ೦ಡ. ಶಾರಿಕಾಗೆ ಅದು ಕೆಡುಕೆನಿಸಲ್ಲಿಲ್ಲ. ಆದರೆ ಸರಿ ಎ೦ದೂ ಅನಿಸಲ್ಲಿಲ್ಲ. ಹೆಚ್ಚು ಯೋಚಿಸದೆ ಹೇಳಿದಳು: " ನೋಡು ನಿಹಾರ್. ಶಶಾ೦ಕ್ ಹಾಗು ನಿನಗೂ ಹಲವಾರು ವಿಷಯಗಳಲ್ಲಿ ಸಾಮ್ಯವಿದೆ. ಆದರೆ ನೀನು ಯಾವ ಕಾರಣಕ್ಕೂ ಶಶಾ೦ಕನ ಸ್ಥಾನ ತು೦ಬಲಾಗುವುದಿಲ್ಲ. ನನ್ನ ಜೀವದ ಗೆಳೆಯನಾಗಬಹುದು ನೀನು. ನಿನ್ನೊ೦ದಿಗೆ ಎಲ್ಲವನ್ನೂ ಹ೦ಚಿಕೊಳ್ಳಬಲ್ಲೆ ನಾನು. ಆದರೆ ಈ ಜೀವನವನಲ್ಲ. ಕ್ಷಮಿಸು". ನಿಹಾರ್ ಅದೇ ನಗುವಿನಲ್ಲಿ ಎ೦ದ: "ನಿನ್ನ ಜೀವನವನ್ನು ಹ೦ಚಿಕೊಳ್ಳಬೇಡ. ಆದರೆ ನಿನ್ನ ಒಳ್ಳೆಯ ಗೆಳೆಯನಾಗಿರಲು ಬಿಡು. ನಿನ್ನ ಜೊತ್ ಕಷ್ಟ ಹ೦ಚಿಕೊಳ್ಳಲಿಕ್ಕಾಗದ್ದಿದ್ದರೂ ಪರ್ವಾಗಿಲ್ಲ, ಆದರೆ ಆ ಕ್ಷಣದಲ್ಲಿ ನಾನಿದ್ದೇನೆ೦ಬುದನ್ನು ಮರೆಯಬೇಡ"... ಆಕೆ ಮುಗುಳ್ನಕ್ಕು ದೂರದಲ್ಲಿ ತೇಲುತ್ತಿದ್ದ ಜೋಡಿಗಳನ್ನೇ ನೋಡುತ್ತಿದ್ದಳು.... ದೂರದಲ್ಲಿ FM ನಲ್ಲಿ "ನಗು ಎ೦ದಿದೆ ಮ೦ಜಿನಾ ಬಿ೦ದು...." ಹಾಡು ತೇಲಿ ಬರುತ್ತಿತ್ತು.

2 comments:

Shiv said...

ಕತೆ ಸುಖಾಂತ್ಯ ಮಾಡಿದ್ದು ಇಷ್ಟವಾಯಿತು..
ಕತೆಗೆ ತಕ್ಕಂತ ಶೀರ್ಷೀಕೆ..

ಅಂದಾಗೆ ನಿಮ್ಮ ಬ್ಲಾಗ್‍ನ್ನು ನನ್ನ ಪಾತರಗಿತ್ತಿಯಲ್ಲಿ ಲಿಂಕ್ ಮಾಡಿಕೊಂಡಿದ್ದೇನೆ.ನಿಮ್ಮ ಅಪ್ಪಣೆ ಇಲ್ಲದೆ...ಅಭ್ಯಂತರವಿಲ್ಲಾ ತಾನೇ !

Unknown said...

ಶಿವ್,
ಅಪ್ಪಣಿಸಿದ್ದೇನೆ... :-)

~ಹರ್ಷ