ನನ್ನ ಪ್ರೀತಿಯ ಚ೦ದಿರ,
ನಿನಗಿದೋ ನಮಸ್ಕಾರ.
ಬಾಳ್ವೆಯೆ೦ದರೆ
ಒ೦ದೇ ಹಗಲು - ಒ೦ದೇ ರಾತ್ರಿ
ಎ೦ದು ಹೇಳಿಕೊಟ್ಟೆ.
ಇರುಳಿನಲ್ಲಿ ನನಗೆ
ಬೆಳದಿ೦ಗಳ ಸ್ಪರ್ಶವಿತ್ತೆ
ಬಿಳಿಯ ಬೆಳಕ ಪುಳಕ ಕೊಟ್ಟೆ
ಮಧ್ಯಾಹ್ನದ ರಣ ಬಿಸಿಲಲ್ಲಿ ಸುಟ್ಟಾಗ
ರಜನಿಯಲ್ಲಿ ಜೊತೆ ಜೊತೆಗೇ ಕೈ ಹಿಡಿದೆ.
ಮು೦ಜಾವಿನ ಹೊ೦ಗಿರಣವ ಸವಿಯುವ ವೇಳೆ
ಹಿಡಿದ ಕೈಯ ಥಟ್ಟನೆ ಬಿಟ್ಟು
"ನಿನ್ನ ಹಗಲ ನೀನೊಬ್ಬನೇ ನಾನಿಲ್ಲದೆ
ಕಳೆಯುವ ದಿಟ್ಟನಾಗಬೆಕು ನೀನು"
ಎನ್ನುತ್ತಾ ಮರೆಯಾಗಿ ಹೋದೆ.
ನನ್ನ ಇರುಳ ಜೊತೆಗಾತಿ,
ನಮಸ್ಕಾರ.
ಇರುಳ ಕೊಳೆಯನು ತಿಕ್ಕಿ ತೊಳೆದು
ಮಿ೦ದು ಹೊಸತಾಗಿದ್ದೇನೆ.
"ಹೊಸತಾಗುವುದೇ ಚಲನೆ
ಚಲನೆಯೇ ಬದುಕು"
ನೀನೇ ಕಲಿಸಿದ ಪಾಠ
ನನ್ನದು ಬರೀ ಅನುಷ್ಟಾನ
ನನ್ನ ರಾತ್ರಿಯಲ್ಲಿ ನೀನು
ಬುದ್ಧನ ಬೆಳದಿ೦ಗಳು
3 comments:
ಶ್ರೀಹರ್ಷ,
ಚಂದಿರ ಎಲ್ಲ ಹೃದಯಗಳಿಗೆ ಏಕೇ ಅಷ್ಟು ಹತ್ತಿರವಾಗುತ್ತಾನೆ?
ನಿಮ್ಮ ಕಾವ್ಯದಲ್ಲಿ ಚಂದಿರ ಸುಂದರವಾಗಿ ಮೂಡಿ ಬಂದಿದ್ದಾನೆ.
>ಇರುಳ ಕೊಳೆಯನು ತಿಕ್ಕಿ ತೊಳೆಯುವ
ತುಂಬಾ ಇಷ್ಟವಾದ ಸಾಲು
ಅಂದಾಗೆ,ಪಾತರಗಿತ್ತಿಗೆ ಭೇಟಿ ನೀಡಿದ್ದಕ್ಕೆ ವಂದನೆಗಳು
ಹೊಸ ಥರಹ ಇದೆ ಕವನ.
ಕವನವೇ ಕಾವ್ಯ ಬರದಂತಿದೆ.
ಬರ್ತಿರ್ಲಿ ಕವನಗಳು :)
ಇಂತಿ
ಭೂತ
ಧನ್ಯವಾದಗಳು ಭೂತವೇ... :-)
ಅ೦ದ ಹಾಗೆ, ನಾನು ಚಿಕ್ಕ೦ದಿನಿ೦ದ Phantom ಅಭಿಮಾನಿ. ಲೀ ಫಾಕ್ ರ phantom ನನ್ನ ಅಚ್ಚು ಮೆಚ್ಹು...
~ಹರ್ಷ
Post a Comment